HEALTH TIPS

ಜಾತ್ಯತೀತತೆ ರಕ್ಷಣೆಗೆ ಪೂಜಾ ಸ್ಥಳಗಳ ಕಾಯ್ದೆ ಅಗತ್ಯ: ಕಾಂಗ್ರೆಸ್‌ ಪ್ರತಿಪಾದನೆ

 ವದೆಹಲಿ: ದೇಶದಲ್ಲಿ ಜಾತ್ಯತೀತತೆಯನ್ನು ರಕ್ಷಿಸುವ ಸಲುವಾಗಿ 'ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ-1991'ರ ಅಗತ್ಯವಿದೆ ಎಂದು ಕಾಂಗ್ರೆಸ್‌ ಪಕ್ಷ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮಧ್ಯಂತರ ಮೇಲ್ಮನವಿಯಲ್ಲಿ ಪಕ್ಷವು ಈ ಪ್ರತಿಪಾದನೆ ಮಾಡಿದೆ.

'ಈ ಕಾಯ್ದೆಯನ್ನು ಸಂಸತ್‌ ರೂಪಿಸಿದ್ದು, ಇದು ಜಾತ್ಯತೀತತೆ ಕುರಿತ ಭಾರತೀಯರ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತದೆ' ಎಂದೂ ಹೇಳಿದೆ.

'ಜಾತ್ಯತೀತ ತತ್ವಗಳನ್ನು ಬುಡಮೇಲು ಮಾಡುವ ದುರುದ್ದೇಶಪೂರಿತ ಪ್ರಯತ್ನದ ಭಾಗವಾಗಿ ಈ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಕಾಯ್ದೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿದರೂ ಅದು ದೇಶದ ಕೋಮು ಸೌಹಾರ್ದ ಹಾಗೂ ಜಾತ್ಯತೀತತೆಯನ್ನು ಸಂಕಷ್ಟಕ್ಕೆ ದೂಡುತ್ತದೆ. ಆ ಮೂಲಕ, ದೇಶದ ಸಾರ್ವಭೌಮತೆ ಹಾಗೂ ಸಮಗ್ರತೆಗೆ ಬೆದರಿಕೆ ಒಡ್ಡುತ್ತದೆ' ಎಂದು ಕಾಂಗ್ರೆಸ್‌ ತನ್ನ ಅರ್ಜಿಯಲ್ಲಿ ಹೇಳಿದೆ.

ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವ ಅರ್ಜಿಯನ್ನು ಸಾರಾಸಗಟಾಗಿ ತಿರಸ್ಕರಿಸುವಂತೆಯೂ ಕೋರಿದೆ.

ಅರ್ಜಿಯ ಪ್ರಮುಖ ಅಂಶಗಳು

  • ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯು ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಮೂಲಭೂತ ಹಕ್ಕುಗಳಿಗೆ ವ್ಯತಿರಿಕ್ತವಾಗಿ ಇಲ್ಲ

  • ಸಂವಿಧಾನದ 25 26 27 ಹಾಗೂ 28ನೇ ವಿಧಿಗಳಲ್ಲಿ ಹೇಳಿರುವಂತೆ ಜಾತ್ಯತೀತ ತತ್ವಗಳ ಪಾಲನೆ ಹಾಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಈ ಕಾಯ್ದೆ ಎತ್ತಿ ಹಿಡಿಯುತ್ತದೆ

  • ದೇಶದ ಎಲ್ಲ ಸಮುದಾಯಗಳ ನಡುವೆ ಸೌಹಾರ್ದಯುತ ಸಂಬಂಧ ಉತ್ತೇಜಿಸುವುದಕ್ಕಾಗಿ ಈ ಕಾಯ್ದೆ ಅಗತ್ಯವಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries