ಲಾಹೋರ್: ವೇದಿಕೆಗಳ ಮೇಲೆ ಅಶ್ಲೀಲತೆ ಹಾಗೂ ಅಸಭ್ಯತೆಯನ್ನು ಪ್ರದರ್ಶಿಸುವ ರಂಗಭೂಮಿ ಕಲಾವಿದರಿಗೆ ಜೀವನ ಪರ್ಯಂತ ನಿಷೇಧ ಹೇರುವ ನಿರ್ಧಾರವನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಸರ್ಕಾರ ಕೈಗೊಂಡಿದೆ.
ಕಲಾವಿದರು ಅಶ್ಲೀಲತೆ ಹಾಗೂ ಅಸಭ್ಯತೆಯನ್ನು ಪ್ರದರ್ಶಿಸಲು ಕಾರಣರಾಗುವ ಕಲಾಮಂದಿರಗಳ ಲೈಸನ್ಸ್ ಅನ್ನೂ ರದ್ದು ಪಡಿಸಲಾಗುವುದು ಎಂದು ಸಂಸ್ಕೃತಿ ಸಚಿವೆ ಅಜ್ಮಾ ಬೋಕಾರಿ ಹೇಳಿದ್ದಾರೆ.
ಕಾರ್ಯಕ್ರಮಗಳಲ್ಲಿ, ನಾಟಕಗಳಲ್ಲಿ ಯಾವುದೇ ಅಶ್ಲೀಲತೆ ಹಾಗೂ ಅಸಭ್ಯತೆಯನ್ನು ಪ್ರದರ್ಶಿಸುವುದಿಲ್ಲ ಎಂಬ ಮುಚ್ಚಳಿಕೆಯನ್ನು ಕಲಾಮಂದಿರಗಳಿಂದ ಬರೆಸಿಕೊಂಡಿದ್ದೇವೆ. ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ಕಾದಿದೆ ಎಂದಿದ್ದಾರೆ.
ಕಲಾ ಸಂಸ್ಥೆಗಳು, ಕಲಾವಿದರು ಅಶ್ಲೀಲತೆ ಹಾಗೂ ಅಸಭ್ಯತೆಗೆ ಅವಕಾಶ ಕೊಡದೇ ಕೌಟುಂಬಿಕವಾಗಿ ನೋಡುವಂತ ಕಾರ್ಯಕ್ರಮಗಳನ್ನು ಮಾತ್ರ ನೀಡಬೇಕು ಎಂದು ಅಜ್ಮಾ ಹೇಳಿದ್ದಾರೆ.




