ಬದಿಯಡ್ಕ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ಕಾಸರಗೋಡು ನಗರ ಬದಿಯಡ್ಕದ ಗಣೇಶ ಮಂದಿರ ಶಾಖೆಯ ಮಾತೃಪೂಜನ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮ ಬುಧವಾರ ಜರಗಿತು.
ಮೊದಲು ಭಜನೆ ನಡೆಯಿತು. ನೇತ್ರಾವತಿ ವಲಯ ಸಂಯೋಜಕ ಜಯರಾಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀರಾಮಚಂದ್ರಾಪುರ ಮಠದ ಮಾತೃಪ್ರಧಾನೆ ಈಶ್ವರಿ ಬೇರ್ಕಡವು ಮಾತನಾಡಿ ಮಾತೆ ಹಾಗೂ ಮಾತೃತ್ವದ ಕುರಿತು ಮನಮುಟ್ಟುವಂತೆ ತಿಳಿಸಿದರು.
ಗಣೇಶ ಮಂದಿರ ಶಾಖೆಯ ಸಹ ಸಂಚಾಲಕ ಲಲಿತ ಅಧ್ಯಕ್ಷತೆ ವಹಿಸಿದ್ದರು. ಅಗ್ನಿಹೋತ್ರ ಪ್ರಮುಖ ಸತ್ಯಜಾತ `ನಗುವೆ ಯೋಗ' ನಡೆಸಿಕೊಟ್ಟರು. ವಿಸ್ತರಣಾ ಪ್ರಮುಖ ಕುಮಾರ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ನಗರ -ಪ್ರಾಂತ ಪ್ರಮುಖರು, ವಲಯ ಪ್ರಮುಖರು, ಯೋಗ ಬಂಧುಗಳು, ಯೋಗೇತರ ಬಂಧುಗಳು ಪಾಲ್ಗೊಂಡಿದ್ದರು. ಮಾತೃ ಭೋಜನದೊಂದಿಗೆ ಸಂಪನ್ನವಾಯಿತು.




.jpg)
