ನಿಂಬೆಹಣ್ಣನ್ನು ಹಿಂಡಿ ರಸ ತೆಗೆದು ಸಿಪ್ಪೆ ಎಸೆಯುವುದು ವಾಡಿಕೆ. ನಿಂಬೆಹಣ್ಣಿನ ಪ್ರಯೋಜನಗಳ ಬಗ್ಗೆ ಗೊತ್ತಿಲ್ಲದವರು ಕಡಿಮೆ. ಆದರೆ ನಿಂಬೆ ಸಿಪ್ಪೆಯು ನಿಂಬೆಯಂತೆಯೇ ಗುಣಲಕ್ಷಣಗಳನ್ನು ಹೊಂದಿದೆ. ನಿಜ ಹೇಳಬೇಕೆಂದರೆ ಈ ಸತ್ಯ ಅನೇಕರಿಗೆ ತಿಳಿದಿಲ್ಲ.
ನಿಂಬೆ ಸಿಪ್ಪೆ ವಿಟಮಿನ್ ಸಿ, ಫೋಲೇಟ್, ಬೀಟಾ-ಕ್ಯಾರೋಟಿನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನ ಮೂಲವಾಗಿದೆ. ನಿಂಬೆ ಹಣ್ಣಿನ ಸಿಪ್ಪೆಯು ನಿಂಬೆ ರಸಕ್ಕಿಂತ ಹೆಚ್ಚು ಪೌಷ್ಟಿಕವಾಗಿದೆ ಎಂಬುದು ಸತ್ಯ. ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ನಿಂಬೆ ರಸಕ್ಕಿಂತ ಹೆಚ್ಚು ವಿಟಮಿನ್ ಸಿ ಇದೆ. ಇದು ಆಂಟಿಆಕ್ಸಿಡೆಂಟ್ ಡಿ-ಲಿಮೋನೆನ್ ಅನ್ನು ಸಹ ಹೊಂದಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇವು ನಿರ್ಣಾಯಕವಾಗಿವೆ.
ನಿಂಬೆ ಸಿಪ್ಪೆಯಲ್ಲಿರುವ ಪೆಕ್ಟಿನ್ ತೂಕ ಇಳಿಸಲು ಸಹಾಯ ಮಾಡುತ್ತದೆ. ನಿಂಬೆ ಸಿಪ್ಪೆಯು ಮೊಡವೆ ಮತ್ತು ಪಿಗ್ಮೆಂಟೇಶನ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಇದರಲ್ಲಿರುವ ಆಸ್ಕೋರ್ಬಿಕ್ ಆಮ್ಲ ಮತ್ತು ವಿಟಮಿನ್ ಸಿ ಸುಕ್ಕುಗಳನ್ನು ತಡೆಯುತ್ತದೆ. ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ
ನಿಂಬೆ ಸಿಪ್ಪೆಯಲ್ಲಿರುವ ಫ್ಲೇವನಾಯ್ಡ್‌ಗಳು, ವಿಟಮಿನ್ ಸಿ ಮತ್ತು ಪೆಕ್ಟಿನ್ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದು ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯಲು ಸಹ ಸಹಾಯ ಮಾಡುತ್ತದೆ.
ನಿಂಬೆ ಸಿಪ್ಪೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ನಿಂಬೆ ಸಿಪ್ಪೆಯು ಬಾಯಿ ಮತ್ತು ಒಸಡುಗಳ ಆರೋಗ್ಯಕ್ಕೂ ಒಳ್ಳೆಯದು. ವಿಟಮಿನ್ ಸಿ ಕೊರತೆಯಿಂದ ಒಸಡುಗಳ ಸ್ಕರ್ವಿಯಂತಹ ಕಾಯಿಲೆಗಳಿಗೆ ಕಾರಣವಾಗಬಹುದು.
ಇದಕ್ಕಾಗಿ ನಿಂಬೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿರಿಸಿ ಬಳಸುವುದು ಉತ್ತಮ. ಬಿಸಿನೀರಿನಲ್ಲಿ ಚಿಟಿಕೆ ಬೆರೆಸಿ ಕುಡಿಯುವುದು ಕೂಡ ಒಳ್ಳೆಯದು.




