HEALTH TIPS

ಮಹಾ ನಡಾವಳಿಗೆ ಸಜ್ಜಾದ ಕುಂಬಳೆ ಚೀರುoಬಾ ಭಗವತಿ ಕ್ಷೇತ್ರ : ಭರದ ಸಿದ್ಧತೆಯಲ್ಲಿ ನಾಡು

ಕುಂಬಳೆ: ಇಲ್ಲಿನ ನಾರಾಯಣಮಂಗಲ ಶ್ರೀ ಚೀರುoಬಾ ಭಗವತಿ ಕ್ಷೇತ್ರದಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುವ ಮಹಾ ನಡಾವಳಿ ಮಹೋತ್ಸವವು ಇದೇ ಫೆಬ್ರವರಿ 27 ರಿಂದ ಮಾರ್ಚ್ ಎರಡರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು, ಇಡೀ ನಾಡಿನ ಮಹಾ ಉತ್ಸವವನ್ನಾಗಿ ಆಚರಿಸಲು ಭರದ ಸಿದ್ಧತೆಗಳು ನಡೆಯುತ್ತಿವೆ. ನಡಾವಳಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಇತ್ತೀಚಿಗೆ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಗಿದ್ದು, ಆಮಂತ್ರಣ ಪತ್ರಿಕೆ ವಿತರಣೆ ಹಾಗೂ ಗೃಹ ಸಂಪರ್ಕ ಭರದಿಂದ ಮುಂದುವರಿಯುತ್ತಿದೆ.

ಶ್ರೀ ಕ್ಷೇತ್ರದಲ್ಲಿ ನಿನ್ನೆ ಜರಗಿದ ಸಮಾರಂಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಆಚಾರ ವರ್ಗದವರಾದ ಚಂದ್ರಶೇಖರ ಎಳೆ ಚೆಟ್ಟಿಯಾರ್ ಅವರಿಗೆ ಪ್ರಥಮ ಪ್ರತಿ ಹಸ್ತಾoತರಿಸುವ ಮೂಲಕ ಕ್ಷೇತ್ರ ತoತ್ರಿವರ್ಯರಾದ ಬ್ರಹ್ಮಶ್ರೀ ಉಳಾಲುಬೀಡು ಪ್ರಕಾಶ ಕಡಮಣ್ಣಾಯ ಅವರು ಬಿಡುಗಡೆಗೊಳಿಸಿದರು.


ಬಳಿಕ ಜರಗಿದ ಸಮಾರಂಭದಲ್ಲಿ ತoತ್ರಿವರ್ಯರು ಆಶೀರ್ವಚನವಿತ್ತು ಉತ್ಸವ ಯಶಸ್ವಿಯಾಗಲೆಂದು ಹರಸಿದರು. ಉತ್ಸವ ಸಮಿತಿ ಗೌರವಧ್ಯಕ್ಷರಾಗಿರುವ ಡಾ. ಕೆ. ಮೋಹನ್ ದಾಸ್ ಬೆಂಗಳೂರು ಅವರು ಪೂರ್ವಸಿದ್ಧತೆಗಳ ಬಗ್ಗೆ ಮಾಹಿತಿಯಿತ್ತರು. ಉತ್ಸವ ಸಮಿತಿ ಅಧ್ಯಕ್ಷ ಪ್ರಮೋದ್ ಅತ್ತಾವರ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಭಾಕರ ಕೂಡ್ಲು, ಕರುಣಾಕರ ಕಾರ್ನವರ್, ವಿಶ್ವನಾಥ ಮಡೆಯ, ಉಪಾಧ್ಯಕ್ಷ ದೇವದಾಸ್ ಕುಂಟoಗೇರಡ್ಕ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಎಂ. ನಾರಾಯಣ, ಕೃಷ್ಣರಾಜ್ ಪೆರ್ಲ, ದಿನೇಶ್ ಕುಂಟoಗೇರಡ್ಕ, ನ್ಯಾಯವಾದಿ ಗಣೇಶ್ ಬದಿಯಡ್ಕ, ಚಂದ್ರಶೇಖರ ಕುಂಟoಗೇರಡ್ಕ, ದಯಾನಂದ ನಾಯ್ಕಾಪು, ಭರತೇಶ್, ಪ್ರಮೋದ್ ನಾಯ್ಕಾಪು, ರಮೇಶ ಎನ್, ಗುಲಾಬಿ ಲಕ್ಷ್ಮಣ, ಸುನೇತ್ರ ಸುವರ್ಣ, ಸುಶೀಲಾ ಬಂದ್ಯೋಡು, ಸಂಧ್ಯಾ ದಿನೇಶ್ ಮೊದಲಾದವರು ಮಾತನಾಡಿದರು. ಉತ್ಸವ ಸಮಿತಿ ಪ್ರಧಾನ ಸಂಚಾಲಕ ರವಿ ನಾಯ್ಕಾಪು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಮಿತಿ ಕಾರ್ಯದರ್ಶಿ ನರೇಂದ್ರ ಬದಿಯಡ್ಕ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries