ಬದಿಯಡ್ಕ: ಮಾರ್ಚ್ 1ರಿಂದ 9ರ ತನಕ ನಡೆಯಲಿರುವ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಿದ್ಧತೆಯ ಭಾಗವಾಗಿ ಶುಕ್ರವಾರ ಬೆಳಗ್ಗೆ ಚಪ್ಪರ ಮುಹೂರ್ತ ನಡೆಯಿತು. ಕ್ಷೇತ್ರದ ಪ್ರಧಾನ ಅರ್ಚಕರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಪ್ರಾರ್ಥನೆ ನಡೆಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಧುಸೂದನ ಆಯರ್ ಮಂಗಳೂರು, ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಟ್ರಸ್ಟಿಗಳಾದ ರಾಮ ಕಾರ್ಮಾರು, ಗೋಪಾಲ ಭಟ್ ಪಿ.ಎಸ್. ಪಟ್ಟಾಜೆ, ಕಾರ್ಯದರ್ಶಿ ಮಹೇಶ್ ವಳಕ್ಕುಂಜ, ಉಪಾಧ್ಯಕ್ಷರುಗಳಾದ ಶ್ಯಾಮಪ್ರಸಾದ ಮೇಗಿನಡ್ಕ, ಸುಂದರ ಶೆಟ್ಟಿ ಕೊಲ್ಲಂಗಾನ, ಯುವಕ ವೃಂದದ ಅಧ್ಯಕ್ಷ ವಿಜಯ ಕುಮಾರ್ ಮಾನ್ಯ, ಕಾರ್ಯದರ್ಶಿ ಗೋಕುಲ ಶರ್ಮ ಕಾರ್ಮಾರು ಸಹಿತ ಕಾರ್ಯಕರ್ತರು ಪಾಲ್ಗೊಂಡಿದ್ದರು.

.jpg)

