HEALTH TIPS

ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಕ್ರಮ: 104 ಮಂದಿ ಭಾರತೀಯರು ಸ್ವದೇಶಕ್ಕೆ ವಾಪಸ್

 ಅಮೃತಸರ: ತನ್ನ ನೆಲದಲ್ಲಿ ಅಕ್ರಮವಾಗಿ ನೆಲೆಸಿದ್ದ ಭಾರತೀಯ ವಲಸಿಗರ ಗಡೀಪಾರು ಪ್ರಕ್ರಿಯೆಯನ್ನು ಅಮೆರಿಕ ಆರಂಭಿಸಿದ್ದು, ಮೊದಲ ಬ್ಯಾಚ್‌ನಲ್ಲಿ 104 ಮಂದಿಯನ್ನು ಹೊತ್ತ ಅಮೆರಿಕದ ವಾಯುಪಡೆ ವಿಮಾನವು ಇಂದು (ಬುಧವಾರ) ಅಮೃತಸರದ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

104 ಮಂದಿ ಭಾರತೀಯರನ್ನು ಹೊತ್ತಿದ್ದ ಅಮೆರಿಕ ವಾಯುಪಡೆ ವಿಮಾನ ಅ-17 205 ಮಧ್ಯಾಹ್ನ 1.55ಕ್ಕೆ ಬಂದಿಳಿಯಿತು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಅಮೆರಿಕ ಗಡೀಪಾರು ಮಾಡಿದವರಲ್ಲಿ 30 ಮಂದಿ ಪಂಜಾಬ್‌ನವರಾಗಿದ್ದರೆ, ಹರಿಯಾಣ ಮತ್ತು ಗುಜರಾತ್‌ನ ತಲಾ 33 ಮಂದಿ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ತಲಾ ಮೂವರು ಮತ್ತು ಚಂಡೀಗಢದ ಇಬ್ಬರು ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾಗಲು ವಾಷಿಂಗ್ಟನ್‌ಗೆ ಪ್ರಯಾಣ ಬೆಳೆಸುವುದಕ್ಕೆ ಕೆಲವೇ ದಿನಗಳ ಮುನ್ನ ಈ ಬೆಳವಣಿಗೆ ನಡೆದಿದೆ.

ಟ್ರಂಪ್ ಅವರು ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎರಡು ವಾರಗಳ ನಂತರ ಅಕ್ರಮ ವಲಸಿಗರ ಮೊದಲ ತಂಡವನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಭಾರತದ ವಲಸಿಗರಿರುವ ವಿಮಾನವು ಮಂಗಳವಾರ ಬೆಳಗಿನ ಜಾವ 3ಕ್ಕೆ (ಭಾರತೀಯ ಕಾಲಮಾನ) ಟೆಕ್ಸಾಸ್‌ನಿಂದ ಪ್ರಯಾಣ ಬೆಳೆಸಿತ್ತು ಎಂದು ಮೂಲಗಳು ತಿಳಿಸಿವೆ.

ಮೊದಲ ತಂಡದಲ್ಲಿ ಗಡೀಪಾರು ಆಗುತ್ತಿರುವ 205 ಮಂದಿಯ ಪೌರತ್ವವನ್ನು ಭಾರತವು ದೃಢಪಡಿಸಿದೆ. ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳು ಪ್ರತಿಯೊಬ್ಬ ವಲಸಿಗರ ಗುರುತನ್ನು ಪರಿಶೀಲಿಸಿದ್ದಾರೆ. ಗಡೀಪಾರು ಪ್ರಕ್ರಿಯೆಯಲ್ಲಿ ಭಾರತವು ಅಮೆರಿಕಕ್ಕೆ ಸಹಕಾರ ನೀಡುತ್ತಿರುವುದನ್ನು ಇದು ಸೂಚಿಸುತ್ತದೆ.

ಟ್ರಂಪ್‌ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅಮೆರಿಕವು ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಆರಂಭಿಸಿತ್ತು. ತನ್ನ ವಾಯುಪಡೆ ವಿಮಾನದಲ್ಲಿ ನೂರಾರು ಅಕ್ರಮ ವಲಸಿಗರನ್ನು ಈಗಾಗಲೇ ಗ್ವಾಟೆಮಾಲ, ಪೆರು ಮತ್ತು ಹಾಂಡುರಸ್‌ಗೆ ಗಡೀಪಾರು ಮಾಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries