ಪತ್ತನಂತಿಟ್ಟ: ಶಬರಿಮಲೆ ಕುಂಭ ಮಾಸದ ಪೂಜೆಗಾಗಿ ಗರ್ಭಗುಡಿಬಾಗಿಲು ಫೆ. 12ರಂದು ಸಂಜೆ 5ಕ್ಕೆ ತೆರೆಯಲಾಗುವುದು. ದೇವಾಲಯದ ತಂತ್ರಿವರ್ಯ ಬ್ರಹ್ಮಶ್ರೀ ಕಂಠರರ್ ಬ್ರಹ್ಮದತ್ತ ಅವರ ಉಪಸ್ಥಿತಿಯಲ್ಲಿ ಮುಖ್ಯ ಅರ್ಚಕ ಎಸ್. ಅರುಣ್ ಕುಮಾರ್ ನಂಬೂದಿರಿ ಗರ್ಭಗುಡಿ ಬಾಗಿಲು ತೆರೆಯುವರು. ಫೆ. 13ರಂದು ಬೆಳಗ್ಗೆ 3ರಿಂದ ತುಪ್ಪಾಭಿಷೇಕ ಆರಂಭಗೊಳ್ಳುವುದು. 17ರಂದು ರಾತ್ರಿ 10ಕ್ಕೆ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚುವ ಮೂಲಕ ಕುಂಭ ಮಾಸದ ಪೂಜೆ ಕೊನೆಗೊಳ್ಳಲಿದೆ. ಶಬರಿಮಲೆ ದರ್ಶನಕ್ಕಾಗಿ ಆಗಮಿಸುವ ಭಕ್ತಾದಿಗಳು ವರ್ಚುವಲ್ ಕ್ಯೂ ಮೂಲಕ ಹೆಸರು ನೋಂದಾಯಿಸಿಕೊಳ್ಳುವಂತೆ ದೇವಸ್ವಂ ಮಂಡಳಿ ಪ್ರಕಟಣೆ ತಿಳಿಸಿದೆ.





