HEALTH TIPS

ಎಬೋಲಾ ಸೋಂಕಿಗೆ ಉಗಾಂಡ ತತ್ತರ- 256 ಮಂದಿ ಕ್ವಾರಂಟೈನ್‌

ಕಂಪಾಲಾ: ಉಗಾಂಡದಲ್ಲಿ ಎಬೋಲಾ ವೈರಾಣು ಸೋಂಕು 9 ಮಂದಿಯಲ್ಲಿ ಪತ್ತೆಯಾಗಿದ್ದು, ಈ ಸಂಬಂಧ 256 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಜ.30ರಂದು ನರ್ಸ್ ಒಬ್ಬರಿಗೆ ಸೋಂಕು ತಗುಲಿ ಮೃತಪಟ್ಟಿದ್ದರು. ಉಳಿದ 9 ಮಂದಿಗೆ ಚಿಕಿತ್ಸೆ ಒದಗಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.

ಕಂಪಾಲಾದ ಮುಖ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಏಳು ಮಂದಿಗೆ ಚಿಕಿತ್ಸೆ ಕಲ್ಪಿಸಲಾಗುತ್ತಿದ್ದು, ಉಳಿದವರಿಗೆ ಪೂರ್ವ ಜಿಲ್ಲೆಯ ಎಂಬಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

2014-16ರಲ್ಲಿ 11ಸಾವಿರ ಮಂದಿ ಬಲಿ: 200 ನೇ ಇಸವಿಯಲ್ಲಿ ಉಗಾಂಡದಲ್ಲಿ ಎಬೋಲಾ ಸೋಂಕಿನಿAದಾಗಿ 200ಜನರ ಅಸುನೀಗಿದ್ದರು. 2014-16ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಈ ಸೋಂಕಿಗೆ 11ಸಾವಿರ ಜನರ ಮೃತಪಟ್ಟಿದ್ದರು. 1976ರ ಸುಮಾರಿನಲ್ಲಿ ದಕ್ಷಿಣ ಸುಡಾನ್ ಮತ್ತು ಕಾಂಗೋದಲ್ಲಿ ಎರಡು ಎಬೋಲಾ ಸೋಂಕು ಪತ್ತೆಯಾಯಿತು. ಎಬೋಲಾ ನದಿಯ ಸಮೀಪದ ಹಳ್ಳಿಯಲ್ಲಿ ರೋಗ ಪತ್ತೆಯಾದ್ದರಿಂದ ಈ ಸೋಂಕಿಗೆ ಎಬೋಲಾ ಎಂದು ಹೆಸರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries