ಕೊಚ್ಚಿ: ಮಂಡಲ ಮಕರ ಬೆಳಕು ಅವಧಿಯಲ್ಲಿ 35 ಲಕ್ಷಕ್ಕೂ ಹೆಚ್ಚು ಅಯ್ಯಪ್ಪ ಭಕ್ತರಿಗೆ ಅನ್ನಪ್ರಸಾದ ಒದಗಿಸಲು ಸಾಧ್ಯವಾಯಿತು ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ. ಶೇಖರ್ ತಿಳಿಸಿದ್ದಾರೆ.
ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯಗಳಲ್ಲಿರುವ 67 ಅಯ್ಯಪ್ಪ ಸೇವಾ ಕೇಂದ್ರಗಳಲ್ಲಿ ಅನ್ನಪ್ರಸಾದ ವಿತರಿಸಲಾಯಿತು. ಎರ್ನಾಕುಳಂ ಪಾವಕ್ಕುಳಂನಲ್ಲಿ ನಡೆದ ಅನ್ನದಾನ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಕಳೆದ ವರ್ಷಕ್ಕಿಂತ ಹನ್ನೊಂದು ಲಕ್ಷ ಹೆಚ್ಚು ಭಕ್ತರು ಅನ್ನಪ್ರಸಾದ ಕೇಂದ್ರಗಳಿಂದ ಅನ್ನದಾನ ಪಡೆದರು ಎಂದವರು ಮಾಹಿತಿ ನೀಡಿದರು. ಸಭೆಯಲ್ಲಿ, ಅಯ್ಯಪ್ಪ ಸೇವಾ ಸಮಾಜ ಮಾರ್ಗದರ್ಶಕರಾದ ಎಸ್. ಸೇತುಮಾಧವನ್, ಎ.ಆರ್. ಮೋಹನನ್, ಉಪಾಧ್ಯಕ್ಷ ಎಸ್.ಜೆ.ಆರ್. ಕುಮಾರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈರೋಡ್ ರಾಜನ್, ಜಂಟಿ ಕಾರ್ಯದರ್ಶಿ ಎಸ್. ವಿನೋದ್ ಕುಮಾರ್, ವಿ.ಕೆ. ವಿಶ್ವನಾಥ್ ಮತ್ತಿತರರು ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳಿ ಕೊಳಂಗಟ್ ವರದಿ ಮಂಡಿಸಿದರು. ಜಂಟಿ ಕಾರ್ಯದರ್ಶಿ ಅಡ್ವ. ಜಯನ್ ಚೆರುವಳ್ಳಿಲ್, ಸಂಘಟನಾ ಕಾರ್ಯದರ್ಶಿ ಕೆ.
ಕೃಷ್ಣನ್‌ಕುಟ್ಟಿ, ಕಾರ್ಯದರ್ಶಿಗಳಾದ ಎರುಮೇಲಿ ಮನೋಜ್, ಸುನಿಲ್ ಕೊಲ್ಲಂ, ರಾಧಾಕೃಷ್ಣನ್ ಪಾಂಡನಾಡ್, ಮಿಥುಲ್ ವಿಝಿಕ್ಕಿಥೋಡ್ ಮತ್ತು ಇತರರು ವಿವಿಧ ಅಯ್ಯಪ್ಪ ಸೇವಾ ಕೇಂದ್ರಗಳ ಕುರಿತು ಮಾತನಾಡಿದರು.




