HEALTH TIPS

ಗಮನಾರ್ಹವಾದ ಐ-ಲೀಡ್ ಉತ್ಪನ್ನ ಪ್ರದರ್ಶನ; 90 ರಷ್ಟು ಉತ್ಪನ್ನಗಳು ಮಾರಾಟ

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರು ಮತ್ತು ಅಂಗವಿಕಲರು ತಯಾರಿಸಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಸಲುವಾಗಿ ಜಿಲ್ಲಾಡಳಿತ ಆಯೋಜಿಸಿದ್ದ ಐ-ಲೀಡ್ ಉತ್ಪನ್ನ ಪ್ರದರ್ಶನವು ಭಾರಿ ಯಶಸ್ಸನ್ನು ಕಂಡಿತು. ಫೆಬ್ರವರಿ 22 ರಂದು ಕಾಸರಗೋಡು ಸಿವಿಲ್ ಸ್ಟೇಶನ್ ನಲ್ಲಿ ನಡೆದ ಪ್ರದರ್ಶನವನ್ನು ಶಾಸಕ ಇ. ಚಂದ್ರಶೇಖರನ್ ಉದ್ಘಾಟಿಸಿದರು. ಶಾಸಕ ವಕೀಲ ಸಿ.ಎಚ್. ಕುಂಞಂಬು, ಎನ್. ಎ. ನೆಲ್ಲಿಕುನ್ನು, ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್ಭಾಶೇಖರ್, ಎಂಡೋಸಲ್ಫಾನ್ ಉಪ ಜಿಲ್ಲಾಧಿಕಾರಿ ಪಿ. ಸುರ್ಜಿತ್, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ ರಾಜ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.


ಜಿಲ್ಲಾಡಳಿತ ಮತ್ತು ಸಾಮಾಜಿಕ ನ್ಯಾಯ ಇಲಾಖೆ ಜಂಟಿಯಾಗಿ ಜಾರಿಗೆ ತಂದಿರುವ ಐ-ಲೀಡ್ (ಇಂಟಿಗ್ರೇಟೆಡ್ ಲೈವ್ಲಿಹುಡ್ ಪ್ರೋಗ್ರಾಂ ಫಾರ್ ಎಂಡೋಸಲ್ಫಾನ್ ವಿಕ್ಟಿಮ್ಸ್ ಅಂಡ್ ದಿ ಡಿಫರೆನ್ಷಿಯಲಿ ಏಬಲ್) ಯೋಜನೆಯ ಭಾಗವಾಗಿ ಆಯೋಜಿಸಲಾದ ಪ್ರದರ್ಶನದಲ್ಲಿ ಶೇ. 85 ರಷ್ಟು ಉತ್ಪನ್ನಗಳು ಮಾರಾಟವಾಗಿವೆ. ಒಟ್ಟು 50,000 ರೂ. ಮೌಲ್ಯದ ಉತ್ಪನ್ನಗಳು ಮಾರಾಟವಾಗಿದ್ದು, ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. 

ಕಾರಡ್ಕ, ಮುಳಿಯಾರ್, ಪುಲ್ಲೂರ್-ಪೆರಿಯ, ಪನತ್ತಡಿ, ಕಲ್ಲಾರ್ ಮತ್ತು ಬದಿಯಡ್ಕ  ಎಂಸಿಆರ್‍ಸಿಗಳಲ್ಲಿ ತಯಾರಾದ ಉತ್ಪನ್ನಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದವು. ಕೈಯಿಂದ ನೇಯ್ದ ನೆಲದ ಚಾಪೆಗಳು, ವಿದ್ಯಾರ್ಥಿಗಳು ಮತ್ತು ಸಣ್ಣ ವ್ಯವಹಾರಗಳಿಗೆ ಉಪಯುಕ್ತವಾದ ನೋಟ್‍ಬುಕ್‍ಗಳು, ಮೂರು ಮಡಿಕೆಯ ಛತ್ರಿಗಳು ಮತ್ತು ಪರಿಸರ ಸ್ನೇಹಿ ಫಿನಾಯಿಲ್ ಇತ್ಯಾದಿಗಳು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ ಮತ್ತು ಮಾರಾಟವನ್ನು ಹೆಚ್ಚಿಸಿವೆ.


ಈ ಉಪಕ್ರಮವು ಅಂಗವಿಕಲರು ಮತ್ತು ಎಂಡೋಸಲ್ಫಾನ್ ಪೀಡಿತರು ತಮ್ಮದೇ ಆದ ಆದಾಯವನ್ನು ಗಳಿಸಲು ಮತ್ತು ಸ್ವಾವಲಂಬನೆಯನ್ನು ಸಾಧಿಸಲು ಒಂದು ಮಾದರಿಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಪ್ರದರ್ಶನವು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಶಾಶ್ವತ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಫಲಾನುಭವಿಗಳು ಆಶಿಸುತ್ತಿದ್ದಾರೆ ಮತ್ತು ಇಂತಹ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಲು ಸಂತಸರಕರ  ಎಂದು ಹೇಳಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries