ವಾಷಿಂಗ್ಟನ್: ಇನ್ನು ಮುಂದೆ ಫೆ.9ರಂದು 'ಗಲ್ಫ್ ಆಫ್ ಅಮೆರಿಕ ದಿನ' ಎಂದು ಘೋಷಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಗಲ್ಫ್ ಆಫ್ ಮೆಕ್ಸಿಕೊದ ಹೆಸರನ್ನು ಟ್ರಂಪ್ ಅಧ್ಯಕ್ಷರಾದ ಬಳಿಕ ಗಲ್ಫ್ ಆಫ್ ಅಮೆರಿಕ ಎಂದು ಮರುನಾಮಕರಣ ಮಾಡಲಾಗಿದೆ.
'ಗಲ್ಫ್ ಆಫ್ ಅಮೆರಿಕ ಎಂದು ಮರುನಾಮಕರಣ ಮಾಡಿದ ಬಳಿಕ ಮೊದಲ ಬಾರಿಗೆ ನಾವು ಅಲ್ಲಿಗೆ ಭೇಟಿ ನೀಡುತ್ತಿದ್ದೇವೆ' ಎಂದು ಟ್ರಂಪ್ ವಾಯಸೇನೆಯ ವಿಮಾನದಲ್ಲಿ ಕುಳಿತು ಹೇಳಿದ್ದಾರೆ.
ಜ.20ರಂದು ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರವಹಿಸಿಕೊಂಡ ಬಳಿಕ ಹಲವು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದರು. ಅದರಲ್ಲಿ ಗಲ್ಫ್ ಆಫ್ ಮೆಕ್ಸಿಕೊ ಹೆಸರನ್ನು ಗಲ್ಫ್ ಆಫ್ ಅಮೆರಿಕ ಎಂದು ಬದಲಾಯಿಸುವುದು ಕೂಡ ಒಂದಾಗಿತ್ತು.
ಟ್ರಂಪ್ ಆದೇಶಕ್ಕೆ ಸಹಿ ಹಾಕುತ್ತಿದ್ದಂತೆ ಅಮೆರಿಕದ ಕರಾವಳಿ ಪಡೆ ಗಲ್ಫ್ ಆಫ್ ಅಮೆರಿಕ ಎಂದೇ ಬಳಸಲಾರಂಭಿಸಿದೆ.




