ನವದೆಹಲಿ: ಕೊಚ್ಚಿಯ ಹೂಡಿಕೆದಾರರ ಶೃಂಗಸಭೆಯ ಮೂಲಕ ಕೇರಳಕ್ಕೆ ಇದುವರೆಗೆ ಸಿಗದ ವ್ಯಾಪಕ ಅಭಿವೃದ್ಧಿ ಯೋಜನೆಗಳು ಕೇಂದ್ರ ಸರ್ಕಾರದಿಂದ ದೊರೆತಿವೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಇವು ಇತರ ಭಾರತೀಯ ರಾಜ್ಯಗಳೊಂದಿಗೆ ಕೇರಳದ ಅಭಿವೃದ್ಧಿಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೂಡಿಕೆದಾರರ ಸಭೆಯಲ್ಲಿ ಭಾಗವಹಿಸಿದ ಮೂವರು ಸಚಿವರ ಮೂಲಕ ಕೇಂದ್ರ ಸರ್ಕಾರ ಪ್ರಸ್ತಾಪಿಸಿದಂತೆ ಹೆದ್ದಾರಿಗಳ ನಿರ್ಮಾಣ, ಬಂದರುಗಳ ಅಭಿವೃದ್ಧಿ ಮತ್ತು ಹೈಸ್ಪೀಡ್ ರೈಲು ಮಾರ್ಗಗಳ ನಿರ್ಮಾಣಗಳು ಕೇರಳದ ಚರ್ಯೆಯಯನ್ನು ಹಿಂದೆಂದಿಗಿಂತಲೂ ಉತ್ತಮವಾಗಿ ಬದಲಾಯಿಸುತ್ತದೆ. ಇವುಗಳು ಒಮ್ಮೆ ಸಾಕಾರಗೊಂಡ ನಂತರ, ಕೇರಳವು ಖಂಡಿತವಾಗಿಯೂ ಅಭಿವೃದ್ಧಿ ಹೊಂದಿದ ಭಾರತದ ದ್ವಾರವಾಗಲಿದೆ.
ಕೇರಳದಲ್ಲಿ ಸತತವಾಗಿ ಅಧಿಕಾರಕ್ಕೆ ಬಂದ ಸಿಪಿಎಂ ಮತ್ತು ಕಾಂಗ್ರೆಸ್ ಸರ್ಕಾರಗಳ ಹಿಂಸಾಚಾರ, ಭ್ರಷ್ಟಾಚಾರ, ವ್ಯವಹಾರ ವಿರೋಧಿ ವಾತಾವರಣ ಮತ್ತು ಹೂಡಿಕೆ ಮತ್ತು ಉದ್ಯೋಗಾವಕಾಶಗಳ ಕೊರತೆ ಇವೆಲ್ಲವೂ ಕೇರಳದ ಅಂತ್ಯವಿಲ್ಲದ ಅಭಿವೃದ್ಧಿ ಸಾಮಥ್ರ್ಯವು ದೀರ್ಘಕಾಲದವರೆಗೆ ವ್ಯರ್ಥವಾಗಲು ಕಾರಣವಾಗಿವೆ. ಕೇರಳದ ಈ ರಾಜಕೀಯ ಪರಿಸ್ಥಿತಿ ಬದಲಾಗಬೇಕು. ನಿಷ್ಕ್ರಿಯತೆಯ ರಾಜಕೀಯದ ಬದಲು ದಕ್ಷತೆಯ ರಾಜಕೀಯವನ್ನು ಇಲ್ಲಿ ಜಾರಿಗೆ ತರಬೇಕು. ಹೂಡಿಕೆದಾರರ ಸಭೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಕೇಂದ್ರ ಸಚಿವರು ಮಂಡಿಸಿದ ಯೋಜನೆಗಳು ರಾಜ್ಯ ಸರ್ಕಾರವು ಅಭಿವೃದ್ಧಿ ಆಧಾರಿತ ರಾಜಕೀಯ ನಿಲುವುಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಕವಾಗಿ ಕಾರ್ಯನಿರ್ವಹಿಸುತ್ತವೆ ಎಂದು ರಾಜೀವ್ ಚಂದ್ರಶೇಖರ್ ಆಶಿಸಿರುವರು.






