ನವದೆಹಲಿ: ಆದಾಯ ತೆರಿಗೆ ಮಸೂದೆ-2025 ಅನ್ನು ಲೋಕಸಭೆಯಲ್ಲಿ ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು.
ಆರಂಭದಲ್ಲಿ ಮಸೂದೆ ಮಂಡನೆಗೆ ವಿರೋಧ ಪಕ್ಷಗಳ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಬಳಿಕ ಧ್ವನಿ ಮತದ ಮೂಲಕ ಮಸೂದೆ ಮಂಡನೆಗೆ ಒಪ್ಪಿಗೆ ಲಭಿಸಿತು.
ಮಸೂದೆ ಮಂಡನೆ ವೇಳೆ, ಕರಡು ಕಾನೂನನ್ನು ಸಂಸದೀಯ ಸಮಿತಿಗೆ ವಹಿಸಬೇಕು ಎಂದು ಸ್ಪೀಕರ್ ಓಂ ಬಿರ್ಲಾರನ್ನು ಸಚಿವೆ ಕೋರಿದರು. ಸಮಿತಿ ಮುಂದಿನ ಅಧಿವೇಶನದ ಮೊದಲ ದಿನ ವರದಿ ಸಲ್ಲಿಸಲಿದೆ.
ಪ್ರಸ್ತಾವಿತ ಸಮಿತಿಯ ರಚನೆ ಮತ್ತು ನಿಯಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸ್ಪೀಕರ್ ಅವರಿಗೆ ಸಚಿವೆ ಮನವಿ ಮಾಡಿದರು.
ಹೊಸ ಮಸೂದೆಯಲ್ಲಿ ತೆರಿಗೆ ಪರಿಭಾಷೆಯನ್ನು ಸರಳಗೊಳಿಸುವ ಪ್ರಸ್ತಾವನೆಗಳಿವೆ.




