ತಿರುವನಂತಪುರಂ: ಅಟ್ಟಿಂಗಲ್‍ನಲ್ಲಿ ವಧೆಗೆ ತಂದಿದ್ದ ಹೋರಿಯೊಂದು ಓಡಿ ಗೃಹಿಣಿಯೊಬ್ಬಳನ್ನು ಹಾಯ್ದು ಗಾಯಗೊಳಿಸಿದ ಘಟನೆ ನಡೆದಿದೆ. ತೋಟವರಂ ಮೂಲದ ಬಿಂದು, ಗೂಳಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವರು. ಎರಡು ಗಂಟೆಗಳ ಸತತ ಯತ್ನದ ನಂತರ ಗೂಳಿಯನ್ನು ನಿಯಂತ್ರಿಸಲಾಯಿತು.
ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕುಳಿಮುಕ್ಕು ಎಂಬಲ್ಲಿ ವಧೆಗಾಗಿ ತಂದ ಹೋರಿಯೊಂದು ಓಡಿ ಈ ಅವಘಡ ನಡೆದಿದೆ. ಹೋರಿಯನ್ನು ಕಟ್ಟಿಹಾಕಿದ್ದ ಸ್ಥಳದ ಸಮೀಪದಲ್ಲಿದ್ದ ಗೃಹಿಣಿಯೊಬ್ಬಳನ್ನು ತಿವಿದಿದೆ. ಗಂಭೀರ ಗಾಯಗೊಂಡ ಗೃಹಿಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಳಿಮುಕ್ಕುವಿನಿಂದ ತಪ್ಪಿಸಿಕೊಂಡಿದ್ದ ಹೋರಿಯನ್ನು ಎರಡು ಗಂಟೆಗಳ ನಂತರ ಕೊಲ್ಲಂಕೋಡ್ ಬಳಿ ವಶಪಡಿಸಿಕೊಳ್ಳಲಾಯಿತು. ಪೋಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದರೂ, ಆಕ್ರಮಣಕಾರಿ ಹೋರಿಯನ್ನು ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ. ಕೊನೆಗೆ, ಆ ಹೋರಿಯನ್ನು ಹತ್ತಿರದ ದೇವಸ್ಥಾನದಲ್ಲಿದ್ದ ಆನೆ ಮಾವುತನು ನಿಯಂತ್ರಿಸಿದನು.


