ಮಂಜೇಶ್ವರ : ಗಡಿ ಪ್ರದೇಶದಲ್ಲಿರುವ ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲೆಯ ವಿದ್ಯಾರ್ಥಿಗಳು ಮಂಜೇಶ್ವರ ಪೋಲೀಸ್ ಠಾಣೆಗೆ ಶೈಕ್ಷಣಿಕ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು
ಈಗಾಗಲೇ ವಿದ್ಯಾರ್ಥಿಗಳನ್ನು ಭಾರತದ ಉತ್ತಮ ಪ್ರಜೆಗಳನ್ನಾಗಿಸುವ ಹಲವು ರೀತಿಯ ವಿಭಿನ್ನ ಚಟುವಟಿಕೆಗಳಿಂದ ಮಾದರಿಯಾಗುತ್ತಿರುವ ಈ ಶಾಲೆಯ ಈ ಪ್ರವಾಸವು ವಿದ್ಯಾರ್ಥಿಗಳಿಗೆ ಕಾನೂನು ವ್ಯವಸ್ಥೆಯ ಕುರಿತು ಪ್ರಾಥಮಿಕ ಅರಿವು ನೀಡುವ ಉದ್ದೇಶ ಹೊಂದಿತ್ತು.
ಮಕ್ಕಳು ಪೋಲೀಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಠಾಣೆಯ ಕಾರ್ಯವಿಧಾನಗಳ ಬಗ್ಗೆ ತಿಳಿದುಕೊಂಡರು. ಅವರಿಗೆ ಕಾನೂನು, ಸಂಚಾರ ನಿಯಮಗಳು, ಮತ್ತು ಪೋಲೀಸ್ ಠಾಣೆಯ ಕರ್ತವ್ಯಗಳ ಬಗ್ಗೆ ವಿವರಿಸಲಾಯಿತು. ಮಂಜೇಶ್ವರ ಠಾಣೆಯ ಪೋಲೀಸರ ಸ್ಪಂದನೆ ಮತ್ತು ಮಕ್ಕಳೊಂದಿಗೆ ಮಾಡಿದ ಸಮಾಲೋಚನೆ ಪ್ರೇರಣಾದಾಯಕವಾಗಿತ್ತು.
ಠಾಣೆಯಲ್ಲಿ ಏನೆಲ್ಲಾ ನಡೆಯುತ್ತಿದೆ. ದೂರುಗಳನ್ನು ಹೇಗೆ ದಾಖಲಿಸಬಹುದು, ಸಮಾಜಿಕ ಕಂಠಕರನ್ನು ಪೋಲೀಸರು ಹೇಗೆ ಪತ್ತೆ ಹಚ್ಚುತ್ತಾರೆ ಎಂಬುದರ ಬಗ್ಗೆ ಮಾಹಿತಿ ನೀಡುವ ಜೊತೆತೆ ವಿವಿಧ ರೀತಿಯ ಬಂದೂಕುಗಳು, ಪ್ರತಿಭಟನಾ ನಿರತರ ವಿರುದ್ಧ ಪ್ರಯೋಗಿಸುವ ಅಶ್ರುವಾಯು ಸೇರಿದಂತೆ ಹಲವು ರೀತಿಯ ಸಾಮಾಗ್ರಿಗಳನ್ನು ತೋರಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಈ ಶೈಕ್ಷಣಿಕ ಪ್ರವಾಸದ ಮೂಲಕ ವಿದ್ಯಾರ್ಥಿಗಳು ಕಾನೂನು ಮತ್ತು ಪೋಲೀಸ್ ಇಲಾಖೆಯ ಮಹತ್ವವನ್ನು ಅರಿತುಕೊಂಡರು. ಮಕ್ಕಳ ಹುಚ್ಚು ಪ್ರಶ್ನೆಗಳಿಗೆ ಪೋಲೀಸರು ಅತ್ಯಂತ ನಾಜೂಕಿನಿಂದ ಉತ್ತರಿಸಿ, ಸಾರ್ವಜನಿಕ ಸೇವೆಯ ಮಹತ್ವವನ್ನು ವಿವರಿಸಿದರು.




.jpg)
.jpg)

