ಕೋಝಿಕ್ಕೋಡ್: ಕೊಯಿಲಾಂಡಿಯ ಕುರುವಂಗಾಡ್ ದೇವಸ್ಥಾನದಲ್ಲಿ ಆನೆಗಳು ಓಟಕ್ಕಿತ್ತಾಗ ಉಂಟಾದ ಅವಘಡದÀ ಬಳಿಕ ಆನೆ ಮಾಲೀಕರು ಮತ್ತು ದೇವಾಲಯದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ನಿರ್ದೇಶನ ನೀಡಿದ್ದಾರೆ.
ಸ್ಥಳೀಯ ಆನೆ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.
ಈ ವಿಷಯದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಿ, ಆನೆ ಮಾಲೀಕರಾದ ಗುರುವಾಯೂರ್ ದೇವಸ್ವಂ ಮಂಡಳಿಗೆ ವಿವರಣೆ ನೀಡುವಂತೆ ಸೂಚಿಸಿತು.
ಕೊಯಿಲಾಂಡಿಯ ಕುರುವಂಗಾಡ್‍ನಲ್ಲಿರುವ ಮಣಕುಲಂಗರ ದೇವಸ್ಥಾನದಲ್ಲಿ ನಡೆದ ಅವಘಡದಲ್ಲಿ ಮೂವರು ಸಾವನ್ನಪ್ಪಿ 32 ಜನರು ಗಾಯಗೊಂಡಿದ್ದು, ಇದು ನಿರ್ಲಕ್ಷ್ಯದ ಪ್ರಕರಣ ಎಂದು ಅರಣ್ಯ ಇಲಾಖೆ ನಿರ್ಣಯಿಸಿದೆ. ಆನೆಗಳ ಕಾಲುಗಳ ಮೇಲೆ ಸರಪಳಿಗಳಿರಲಿಲ್ಲ ಎಂದು ಬಳಿಕದ ತನಿಖೆಯಿಂದ ವೇದ್ಯವಾಗಿದೆ.
ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಆರ್. ಕೀರ್ತಿ ಅವರು ಅರಣ್ಯ ಸಚಿವರಿಗೆ ಸಲ್ಲಿಸಿದ ಆರಂಭಿಕ ವರದಿಯಲ್ಲಿ ಆನೆ ಸಂರಕ್ಷಣಾ ನಿಯಮಗಳನ್ನು ಉಲ್ಲಂಘಿಸಿ ಪಟಾಕಿಗಳನ್ನು ಸಿಡಿಸಲಾಗಿದೆ ಎಂದು ಹೇಳಲಾಗಿದೆ.
ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ದೇವಸ್ವಂ ಜಾನುವಾರು ಉಪ ಆಡಳಿತಾಧಿಕಾರಿಗೆ ಖುದ್ದಾಗಿ ಹಾಜರಾಗಿ ವಿವರಣೆ ನೀಡುವಂತೆ ಹೈಕೋರ್ಟ್ ಸೂಚಿಸಿತು. ಆನೆಯನ್ನು ಇಷ್ಟು ದೂರ ಏಕೆ ತೆಗೆದುಕೊಂಡು ಹೋಗಲಾಯಿತು ಎಂದು ನ್ಯಾಯಾಲಯ ಕೇಳಿತು. ಆನೆಯ ಆಹಾರ ಮತ್ತು ಪ್ರಯಾಣದ ನೋಂದಣಿಗಳು ಸೇರಿದಂತೆ ದಾಖಲೆಗಳನ್ನು ತೋರಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ.
ಈ ಮಧ್ಯೆ, ನಿಯಮಗಳನ್ನು ಪಾಲಿಸಿ ಆನೆಗಳನ್ನು ಮೆರವಣಿಗೆಗೆ ತರಲಾಗಿದೆ ಎಂದು ಮಣಕುಲಂಗರ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿದರೆ ಕಾನೂನುಬದ್ಧವಾಗಿ ವ್ಯವಹರಿಸಲಾಗುವುದು ಎಮದದು ತಿಳಿಸಿದೆ.






