ಕಾಸರಗೋಡು: ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿ(ರಿ)ಕಸರಗೋಡು ವತಿಯಿಂದ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯ ಸಮ್ಮೇಳನದಲ್ಲಿ ವಿಶೇಷ ಪ್ರಶಸ್ತಿಗೆ ಭಾಜನರಾದ ಕಾಸರಗೋಡಿನ ಹಿರಿಯ ಪತ್ರಕರ್ತ ವೀಜಿ ಕಾಸರಗೋಡು ಅವರಿಗೆ ಗೌರವಾರ್ಪಣೆ ಸಮಾರಂಭ ಇಂದು ಬೆಳಗ್ಗೆ 9ಕ್ಕೆ ಕಾಸರಗೋಡು ಅಡ್ಕತ್ತಬೈಲು ಉಡುಪಿ ಗಾರ್ಡನ್ ಸಭಾಂಗಣದಲ್ಲಿ ಜರುಗಲಿದೆ.
ಕನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಸಮಾರಂಭ ಉದ್ಘಾಟಿಸುವರು. ಅಕಾಡಮಿ ಸಂಸ್ಥಾಪಕ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ವೀಜಿ ಕಾಸರಗೋಡು ಅವರನ್ನು ಗೌರವಿಸುವರು.





