ನೀವು ರಾತ್ರಿ ಸಮಯದಲ್ಲಿ ನಿದ್ರೆ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತಿದ್ದೀರಾ? ಅಥವಾ ನಿದ್ರೆಯೇ ಬಾರದೆ ರಾತ್ರಿ ಎಲ್ಲಾ ಎಚ್ಚರವಾಗಿಯೇ ಇರುತ್ತೀರಾ? ಈ ಸಮಸ್ಯೆಯಿಂದ ಪಾರಾಗಲು ನೀವು ಹಲವು ರೀತಿಯ ಉಪಾಯ ಮಾಡಿರಬಹುದು. ಕೆಲವೊಮ್ಮೆ ನಿಮಗೆ ಈ ಉಪಾಯಗಳು ಪರಿಣಾಮಕಾರಿಯಾಗಿ ನಿದ್ರೆಯೂ ಬಂದಿರಬಹುದು, ಆದ್ರೆ ಈ ನಿದ್ರಾಹೀನತೆ ಅನ್ನೋದು ಬಹಳಷ್ಟು ಕಾಡಿರಬಹುದು.
ಅದರಲ್ಲೂ ಇತ್ತಿಚಿನ ದಿನಗಳಲ್ಲಿ ನಿದ್ರಾಹೀನತೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತಿರುವುದನ್ನು ನಾವು ನೋಡಿದ್ದೇವೆ. ಇದು ಅನೇಕ ರೀತಿಯಲ್ಲಿ ಹಾನಿಗೆ ಕಾರಣವಾಗುತ್ತದೆ. ಆದ್ರೆ ಈ ನಿದ್ರೆ ಇಲ್ಲದಿರು ಸ್ಥಿತಿಗೆ ಕಾರಣವೇನಿರಬಹುದು ಎಂಬುದನ್ನು ನೀವು ಎಂದಾದರು ಆಲೋಚಿಸಿದ್ದೀರಾ?
ಆದ್ರೆ ಇತ್ತೀಚಿನ ಅಧ್ಯಯನವೊಂದರಲ್ಲಿ ಈ ನಿದ್ರಾಹೀನತೆಯಂತಹ ಸಮಸ್ಯೆಗೆ ನಿಮ್ಮ ತಾಯಿ ಕಾರಣವಂತೆ. ಅಚ್ಚರಿ ಎನಿಸಬಹುದು, ನಿಮ್ಮ ತಾಯಿಯಿಂದ ಬಂದಿರುವ ಜೀನ್ ಒಂದು ನಿದ್ರಾಹೀನತೆ ಉಂಟುಮಾಡಲು ಕಾರಣವಾಗುತ್ತದೆ ಎಂದು ಇತ್ತೀಚಿನ ಅಧ್ಯಯನದಲ್ಲಿ ತಿಳಿದುಬಂದಿದೆ. ವೈದ್ಯರ ವೃತ್ತಿಪರ ಸಂಸ್ಥೆಯಾದ ಅಮೇರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ ನಡೆಸಿರುವ ಒಂದು ಅಧ್ಯಯನದಲ್ಲಿ ಶೇ.30ರಷ್ಟು ವಯಸ್ಕರಲ್ಲಿ ನಿದ್ರಾಹೀನತೆಗೆ ಈ ಜೀನ್‌ಗಳ ಕೊಡುಗೆ ಅಪಾರವಾಗಿದೆ ಎಂದು ಕಂಡುಕೊಳ್ಳಲಾಗಿದೆ.
ಸಿರ್ಕಾಡಿಯನ್ ಎಂಬ ನಿದ್ರೆಗೆ ಕಾರಣವಾಗುವ ಲಯಗಳು ಭಾಗಶಃ ಜೀನ್‌ಗಳಿಂದಾಗಿ ನಿರ್ಧರಿತವಾಗುತ್ತದೆ. ಈ ಜೀನ್‌ಗಳು ತಾಯಿಯಿಂದ ಬಂದಿರುವ ಒಂದು ಜೀನ್ ಆಗಿರುತ್ತದೆ. ನಿದ್ರಾಹೀನತೆ ಹೊಂದಿರುವ ತಾಯಂದಿರ ಮಕ್ಕಳಲ್ಲಿ ಹೆಚ್ಚಾಗಿ ನಿದ್ರಾಹೀನತೆ ಸಮಸ್ಯೆ ನೋಡಬಹುದು ಎಂದು ಅಧ್ಯಯನ ಹೇಳುತ್ತದೆ. ಅಂದರೆ ಕಳಪೆ ನಿದ್ರೆಯು ಅನುವಂಶೀಯವಾಗಿರಬಹುದು ಎಂದು ಅಂದಾಜಿಸಲಾಗಿದೆ.
ತಾಯಿಯ ಮೂಲಕ ಬಂದಿರುವ ಜೀನ್ ನಿಮ್ಮ ಆಂತರಿಕ ಸಮಯದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಹಾಗೆ ಜೀನ್ಸ್ ರೂಪಾಂತರಗೊಂಡು ಮುಂದಿನ ಜನರೇಷನ್ ಈ ಆಂತರಿಕ ಸಮಯ ಹೊಂದಾಣಿಕೆಯಲ್ಲಿ ಏರುಪೇರು ಉಂಟಾಗಬಹುದು ಎಂದು ವೈದ್ಯರು ಹೇಳುತ್ತಾರೆ.
ಮಲಗಿದ ತಕ್ಷಣ ನಿದ್ರೆ ಬರಬೇಕು ಅಂದರೆ ಏನು ಮಾಡಬೇಕು?
ಮಲಗುವ ಕೆಲ ಸಮಯದ ಮುನ್ನ ಹೊಟ್ಟೆ ತುಂಬುವಷ್ಟು ಊಟ, ತಿಂಡಿ ಮಾಡಬಾರದು
ರಾತ್ರಿಯ ಊಟ ಕನಿಷ್ಠ 8 ಗಂಟೆಯ ಒಳಗೆ ಮಾಡಿ ಮುಗಿಸವೇಕು
ಮಲಗುವ ಮುನ್ನ ಫೋನ್, ಟಿವಿ, ಕಂಪ್ಯೂಟರ್ ಬಳಕೆ ಮಾಡುವುದನ್ನು ನಿಲ್ಲಿಸಿ
ಊಟದ ಬಳಿಕ ಚಿಕ್ಕದಾದ ವಾಕಿಂಗ್, ವ್ಯಾಯಾಮದಲ್ಲಿ ತೊಡಗುವುದು
ಕೋಣೆಯ ತಾಪಮಾನ ಸಮತೋಲನದಲ್ಲಿಡುವುದು
ಮಲಗುವ ಮುನ್ನ ಉಗುರು ಬೆಚ್ಚಗಿನ ನೀರು ಅಥವಾ ಹಾಲು ಕುಡಿಯಿರಿ
ಪ್ರತಿ ದಿನ ಒಂದೇ ಸಮಯದಲ್ಲಿ ಮಲಗುವ ಅಭ್ಯಾಸ ಮಾಡಿ.
ತಾಯಿಯಿಂದ ನಿಮಗೆ ಬರಬಹುದಾದ ಜೀನ್ಸ್‌ಗಳು
ಕಾಯಿಲೆಗಳು
ಹೌದು ಜೀನ್ಸ್‌ಗಳಿಂದ ಗುಣ ಲಕ್ಷಣಗಳು ಯಾರಿಗೂ ಬರುವುದಿಲ್ಲ, ಆದರೆ ತಾಯಿಯಲ್ಲಿ ತಂದೆಯಲ್ಲಿರುವ ಕಾಯಿಲೆಗಳು ಜೀನ್ ಮೂಲಕ ಬರುತ್ತದೆ. ಅನುವಂಶಿಕವಾಗಿ ಬರುವಂತಹ ಎಲ್ಲಾ ಸಮಸ್ಯೆಗಳು ಜೀನ್ಸ್ ಮೂಲಕವೇ ಕೊಡುಗೆಯಾಗಿ ಬರುತ್ತದೆ. ಹಂಟಿಂಗ್ಟನ್ ಕಾಯಿಲೆಯಂತಹ ಪರಿಸ್ಥಿತಿಗಳು ಜೀನ್ ಮೂಲಕ ಬರುತ್ತದೆ. ಅದರಲ್ಲೂ ನೀವು ಗಂಡು ಮಗು ಆಗಿದ್ದರೆ ತಾಯಿಯಿಂದ ಬಂದಿರುವ ಜೀನ್‌ನಿಂದ ಹೆಚ್ಚು ಪ್ರಭಾವಕ್ಕೆ ಒಳಗಾಗುತ್ತೀರಿ. ಏಕೆಂದರೆ ಗಂಡಿನಲ್ಲಿ ಒಂದು X ಮತ್ತು ಒಂದು Y ಕ್ರೋಮೋಜೋಮ್ ಇರಲಿದೆ. ಎಕ್ಸ್ ತಾಯಿಯಿಂದ ವೈ ತಂದೆಯಿಂದ ಬಂದಿರುವ ಕ್ರೋಮೋಜೋಮ್ ಆಗಿರಲಿದೆ.
ಹೆಣ್ಣು ಮಕ್ಕಳಲ್ಲಿ ಎರಡು XX ಕ್ರೋಮೋಜೋಮ್ ಇರುವ ಕಾರಣ ದೋಷಯುಕ್ತ ಜೀನ್‌ಗಳ ಪರಿಣಾಮ ನೈಸರ್ಗಿಕವಾಗಿ ಕಡಿಮೆಯಾಗುತ್ತದೆ. ಹಾಗೆ ನಿಮ್ಮ ಬುದ್ದಿವಂತಿಕೆಗೂ ಕೂಡ ತಾಯಿಯಿಂದ ಬರುವ ಜೀನ್ ಕಾರಣವಾಗಿರಬಹುದು. ಬುದ್ದಿವಂತಿಕೆಗೆ ಕಾರಣವಾಗಿ X ಕ್ರೋಮೋಜೋಮ್ ಅನ್ನು ಅನುವಂಶಿಯವಾಗಿ ಪಡೆದಿರುತ್ತೀರಿ. ಹೆಣ್ಣುಮಕ್ಕಳಲ್ಲಿ ಎರಡೂ XX ಕ್ರೋಮೋಜೋಮ್ ಇರುವ ಕಾರಣ ಅವರ ಬುದ್ದಿವಂತಿಕೆಯು ತಾಯಿಯಿಂದ ಬಂದ ಕೊಡುಗೆ ಎನ್ನಬಹುದು.






