ಬದಿಯಡ್ಕ: ಎಡನೀರು ವಿಷ್ಣುಮಂಗಲ ದೇವಸ್ಥಾನದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ವಾರ್ಷಿಕ ಮಹೋತ್ಸವ ಭಾನುವಾರ ಸಮಾರೋಪಗೊಂಡಿತು. ಭಾನುವಾರ ಬೆಳಗ್ಗೆ 8.30ಕ್ಕೆ ಶಯನೋದ್ಘಾಟನೆ ನಂತರ ಮಂಗಳಾಭಿಷೇಕ. ತುಲಾಭಾರ ಸೇವೆ, ತಿಡಂಬು ನೃತ್ಯ, ಸಂಜೆ 5.30 ರಿಂದ ಶ್ರೀಮಠದ ಮುಭಾಗದಲ್ಲಿ ನೃತ್ಯೋತ್ಸವ, ತೆಪ್ಪೋತ್ಸವ, ಅವಭೃತ ಸ್ನಾನ, ಪ್ರಸಾದ ವಿತರಣೆ, ಧ್ವಜಾವರೋಹಣದೊಂದಿಗೆ ಉತ್ಸವ ಸಂಪನ್ನಗೊಂಡಿತು.
ರಾತ್ರಿ 8.30ರಿಂದ ಪುತ್ತೂರು ಜಗದೀಶ ಆಚಾರ್ಯ ಮತ್ತು ತಂಡದವರಿಂದ ಭಕ್ತಿಗೀತೆ ಕಾರ್ಯಕ್ರಮ ನಡೆಯಿತು.
ಶನಿವಾರ ಶ್ರೀಭೂತಬಲಿ, ರಾತ್ರಿ ಬೆಡಿ ಉತ್ಸವ, ಶ್ರೀಮಠದ ಮುಂಭಾಗ ಪುಷ್ಪರಥೋತ್ಸವ ನಡೆಯಿತು.




.jpg)
.jpg)


