ಬದಿಯಡ್ಕ: ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವವು ಜರಗುತ್ತಿದ್ದು, ಇಂದು(ಭಾನುವಾರ) ಶ್ರೀ ದೇವರಿಗೆ ಸಹಸ್ರಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ಜರಗಲಿದೆ. ಪೂರ್ವಾಹ್ನ 108 ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠಾಪಾಣಿ, ಶ್ರೀದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೆಕ, ಪ್ರತಿಷ್ಠಾಬಲಿ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀರಾಮಚಂದ್ರಾಪುರ ಮಠ ಅವರ ಆಗಮನ, ಪೂರ್ಣಕುಂಭ ಸ್ವಾಗತ, ಶೋಭಾಯಾತ್ರೆ, ಶಿವಸಂದೇಶ ಸಭಾದಲ್ಲಿ ಶ್ರೀಗಳಿಂದ ಆಶೀರ್ವಚನ. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ದಿವ್ಯ ಉಪಸ್ಥಿತರಿರುವರು. ವೇದಮೂರ್ತಿ ಶಿವಶಂಕರ ಭಟ್ ಪಳ್ಳತ್ತಡ್ಕ, ವಾಸ್ತುತಜ್ಞ ಕೆ.ಎನ್. ಭಟ್ ಬೆಳ್ಳಿಗೆ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಉಪಸ್ಥಿತರಿರುವರು. ಖ್ಯಾತ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಲಾರ್ಪಣಮ್ ನಟರಾಜ ವೇದಿಕೆಯಲ್ಲಿ ಪೂರ್ವಾಹ್ನ 9ರಿಂದ 10.30ರ ವರೆಗೆ ಸಪ್ತಸ್ವರ ಸಂಗೀತ ಶಾಲೆ ಪುತ್ತೂರು ಇವರಿಂದ ಭಕ್ತಿಸಂಗೀತ, 10.30ರಿಂದ 11.30 ಸಾಮೂಹಿಕ ರುದ್ರ ಪಾರಾಯಣ ಸೇವೆ, ಸಂಜೆ 4ರಿಂದ ಶಾಸ್ತ್ರೀಯ ಸಂಗೀತ ಮತ್ತು ಯಕ್ಷಗಾನ ಬಯಲಾಟ ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಇದರ ವಿದ್ಯಾರ್ಥಿಗಳಿಂದ ನಡೆಯಲಿದೆ.
ಶನಿವಾರ ಬೆಳಗ್ಗೆ ಗಣಪತಿ ಹೋಮ, ತ್ರಿಕಾಲಪೂಜೆ, ಸಂಹಾರತತ್ವ ಹೋಮ, ತತ್ವಕಲಶ ಪೂಜೆ, ಕುಂಭೇಶ ಕರ್ಕರಿ ಪೂಜೆ, ಶಯ್ಯಾಪೂಜೆ, ಅವಾಸ ಹೋಮದ ಅಗ್ನಿಜನನ, ತತ್ವಕಲಶಾಭಿಷೇಕ, ಜೀವಕಲಶ ಪೂಜೆ, ಜೀವೋದ್ವಾಸನೆ, ಜೀವಕಲಶ, ಶಯ್ಯೋನ್ನಯನ, ಅಂಕುರ ಪೂಜೆ, ಮಹಾಪೂಜೆ ನಡೆಯಿತು.





