ಕಾಸರಗೋಡು: ಸಿಪಿಎಂ ನಿಯಂತ್ರಣದಲ್ಲಿರುವ ಕಾರಡ್ಕ ಕೃಷಿ ಕ್ಷೇಮಾಭಿವೃದ್ಧಿ ಸೇವಾ ಸಕಕಾರಿ ಬ್ಯಾಂಕ್ ನಲ್ಲಿ ಎಸಗಲಾದ 4.76 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಬಿಜೆಪಿ ಮುಖಂಡ ಸೇರಿದಂತೆ ಇನ್ನೂ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾಞಂಗಾಡು ನಗರಸಭಾ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಅಜಯಕುಮಾರ್ ನೆಲ್ಲಿಕ್ಕಟ್ಟೆ, ಪೆರಿಯ ಶೇಫೀಕ್, ಅವರ ಪತ್ನಿ ಫಾತಿಮತ್ ತಾಹಿರಾ, ಪಳ್ಳಿಕ್ಕೆರೆಯ ಫೌಜಿಯಾ ಮತ್ತು ಪುತ್ರಿ ಫೈಸಾ ಅವರನ್ನು ರಾಜ್ಯ ಅಪರಾಧ ವಿಭಾಗದ ಆರ್ಥಿಕ ಅಪರಾಧ ತನಿಖಾ ವಿಭಾಗ ವಂಚನೆ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಿದೆ. ಇದರೊಂದಿಗೆ ಪ್ರಕರಣದ ಒಟ್ಟು ಆರೋಪಿಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಕದ್ದ ಚಿನ್ನವನ್ನು ಗುಂಪಿನಿಂದ ಗಿರವಿ ಇಡಲು ಸಹಾಯ ಮಾಡಿದರು ಎಂಬುದು ಅವರ ಮೇಲಿನ ಆರೋಪ. ಹೊಸದಾಗಿ ಸೇರ್ಪಡೆಗೊಂಡ ಆರೋಪಿಗಳನ್ನು ಸಾಕ್ಷಿಗಳನ್ನಾಗಿ ಮಾಡುವುದು ತನಿಖಾ ತಂಡದ ಮೊದಲ ನಿರ್ಧಾರವಾಗಿತ್ತು. ಆದರೆ ತನಿಖಾ ತಂಡಕ್ಕೆ ಬಂದಿರುವ ಆದೇಶ ಅವರನ್ನೂ ಆರೋಪಿಗಳನ್ನಾಗಿ ಮಾಡಲು ನಿರ್ದೇಶಿಸಿದೆ.332 ಪವನ್ ಚಿನ್ನವನ್ನು ಅಮಾನತುಗೊಳಿಸಿ, ಬ್ಯಾಂಕ್ ಮಾಜಿ ಕಾರ್ಯದರ್ಶಿ ಕೆ. ರತೀಶನ್ . ಅವರು ಸಿಪಿಎಂನ ಮಾಜಿ ಸ್ಥಳೀಯ ಸಮಿತಿ ಸದಸ್ಯರಾಗಿದ್ದಾರೆ. ಬೇಕಲ ಹದ್ದದ್ ನಗರದ ಪಳ್ಳಿಕ್ಕರ ಪಂಚಾಯತ್ ಸದಸ್ಯ ಹಾಗೂ ಮುಸ್ಲಿಂ ಲೀಗ್ ಸ್ಥಳೀಯ ಮುಖಂಡ ಕೆ. ಅಹ್ಮದ್ ಬಶೀರ್, ಪಗಳಾಯಿ 7ನೇ ಮೈಲಿ ನೆಲ್ಲಿಕಟ್ಟೆಯ ಅಬ್ದುಲ್ ಗಫೂರ್ ಎ. ಪಯ್ಯನ್ನೂರಿನ ಬಾಡಿಗೆ ಕ್ವಾರ್ಟರ್ಸ್ ನಿವಾಸಿ ಅನಿಲ್ ಕುಮಾರ್ ಮತ್ತು ಕಣ್ಣೂರಿನ ಅಬ್ದುಲ್ ಜಬ್ಬಾರ್, ಕೋಝಿಕ್ಕೋಡ್ ಸಿ. ನಬೀಲ್ ಪ್ರಕರಣದ ಇತರ ಆರೋಪಿಗಳು.

