ಕಾಸರಗೋಡು: ಕೇರಳ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಸಿ-ಆಪ್ಟ್ ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿಯಾಗಿ ನಡೆಸುವ ಆರು ತಿಂಗಳ ಕಾಲಾವಧಿಯ ಪಿ.ಎಸ್.ಸಿ ಮಾನ್ಯತೆ ಪಡೆತ ಸರ್ಟಿಫಿಕೇಟ್ ಇನ್ ಕಂಪ್ಯೂಟರ್ ಆ್ಯಂಡ್ ಡಿ.ಟಿ.ಪಿ ಎಂಬ ಕೋರ್ಸ್‍ಗೆ ಕೋಯಿಕ್ಕೋಡ್ ಉಪ ಕೇಂದ್ರದಲ್ಲಿ ಫೆಬ್ರವರಿ 7 ರವರೆಗೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾದವರಿಗೆ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇತರ ಅರ್ಹ ವಿಭಾಗಗಳು ಶಾಸನಬದ್ಧ ಶುಲ್ಕ ಭತ್ಯೆ ಮತ್ತು ವಿದ್ಯಾರ್ಥಿವೇತನ ಲಭಿಸಲಿದೆ. ಒ.ಬಿ.ಸಿ, ಎಸ್.ಇ.ಬಿ.ಸಿ, ಸಮುದಾಯದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ, ಆದಾಯ ಮಿತಿಗೆ ಒಳಪಟ್ಟು ಶುಲ್ಕ ರಿಯಾಯಿತಿ ಲಭಿಸುವುದು. ಸಿ-ಆಪ್ಟ್‍ನ ಕೋಯಿಕೋಡ್ ಉಪಕೇಂದ್ರದಲ್ಲಿ ಕೋರ್ಸ್‍ಗಳನ್ನು ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ, ಮೊಬೈಲ್ ಸಂಖ್ಯೆ(0495 2723666, 0495 2356591, 9037527407 ಸಂಪರ್ಕಿಸಬಹುದಗಿದೆ. ಇ-ಮೇಲ್ ಞozhiಞoಜe@ಛಿಚಿಠಿಣಞeಡಿಚಿಟಚಿ.ಛಿom . ಹೆಚ್ಚಿನ ಮಾಹಿತಿ www.captkerala.com ಎಂಬ ವೆಬ್ ಸೈಟ್ ನಲ್ಲಿ ಲಭ್ಯವಿರುವುದಾಗಿ ಪ್ರಕಟಣೆ ತಿಳಿಸಿದೆ.




