ಕೊಟ್ಟಾಯಂ: ಕೊಟ್ಟಾಯಂ ನರ್ಸಿಂಗ್ ಕಾಲೇಜಿನಲ್ಲಿ ಸಂಬಂಧ ಮತ್ತಷ್ಟು ವಿಷಯಗಳು ಹೊರಬಿದ್ದಿವೆ. ಹುಟ್ಟುಹಬ್ಬದ ಆಚರಣೆಗೆ ಹಣ ನೀಡಲು ನಿರಾಕರಿಸಿದ ಕಾರಣ ಆರೋಪಿಗಳು ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ಆರೋಪಿಗಳು ದೂರುದಾರ ವಿದ್ಯಾರ್ಥಿಗಳಿಂದ ಮದ್ಯ ಖರೀದಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಆದರೆ ವಿದ್ಯಾರ್ಥಿಗಳು ಹಣ ನೀಡಲು ಸಿದ್ಧರಿರಲಿಲ್ಲ. ಹಣ ಪಾವತಿಸಲು ವಿಫಲವಾದಾಗ, ಅವರನ್ನು ಹಾಸಿಗೆಗೆ ಕಟ್ಟಿಹಾಕಿ ಕೈವಾರದಿಂದ ಇರಿದಿದ್ದರು. ಈ ದೃಶ್ಯಗಳನ್ನು ಆರೋಪಿಗಳೇ ಚಿತ್ರೀಕರಿಸಿಕೊಂಡಿದ್ದಾರೆ. ನಿನ್ನೆ ಆಘಾತಕಾರಿ ದೃಶ್ಯಗಳು ಬಿಡುಗಡೆಯಾಗಿವೆ.
ಇದೇ ವೇಳೆ, ಪೋಲೀಸರು ಘಟನೆಯ ತನಿಖೆ ಮುಂದುವರೆಸಿದ್ದಾರೆ. ತನಿಖಾ ತಂಡವು ಕಾಲೇಜು ಮತ್ತು ಹಾಸ್ಟೆಲ್‍ನಲ್ಲಿ ವಿವರವಾದ ಪರಿಶೀಲನೆ ನಡೆಸಲಿದೆ. ಪ್ರಕರಣದಲ್ಲಿ ಕೇವಲ ಐದು ಮಂದಿ ಆರೋಪಿಗಳಿದ್ದಾರೆ ಎಂದು ಪೆÇಲೀಸರು ಪ್ರಸ್ತುತ ತೀರ್ಮಾನಿಸಿದ್ದಾರೆ. ವಿವರವಾದ ತನಿಖೆಯಿಂದ ಇನ್ನಷ್ಟ್ಟು ಶಂಕಿತರು ಇದ್ದಾರೆಯೇ ಎಂಬುದು ಬಹಿರಂಗಗೊಳ್ಳುತ್ತದೆ.
ಪ್ರಸ್ತುತ ದೂರಿನಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಂದ ಪೆÇಲೀಸರು ವಿವರವಾದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಸೋರಿಕೆಯಾದ ದೃಶ್ಯಗಳನ್ನು ಪರಿಶೀಲಿಸಲು ಪೋಲೀಸರು ಸೈಬರ್ ಸೆಲ್‍ನ ಸಹಾಯವನ್ನು ಪಡೆಯಲಿದ್ದಾರೆ. ಆರೋಪಿಗಳ ಮೊಬೈಲ್ ಪೋನ್‍ಗಳಲ್ಲಿ ಬೇರೆ ಯಾವುದಾದರೂ ದೃಶ್ಯಗಳಿವೆಯೇ ಎಂದು ನಿರ್ಧರಿಸಲು ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.
ಪ್ರಸ್ತುತ ರಿಮಾಂಡ್‍ನಲ್ಲಿರುವ ಶಂಕಿತರನ್ನು ಪೋಲೀಸರು ತಕ್ಷಣ ಕಸ್ಟಡಿಗೆ ತೆಗೆದುಕೊಳ್ಳುವುದಿಲ್ಲ. ವಿವರವಾದ ತನಿಖೆಯ ನಂತರ ಕಸ್ಟಡಿ ಅರ್ಜಿ ಸಲ್ಲಿಸಲಾಗುವುದು.



