ತ್ರಿಶೂರ್: ಕರ್ನಾಟಕ ಸ್ಪೀಕರ್ ಅವರ ಸಂಬಂಧಿಯೊಬ್ಬರ ಮನೆ ಮೇಲೆ ಇ.ಡಿ.ಅಧಿಕಾರಿಯೆಂದು ಹೇಳಿಕೊಂಡು ನಕಲಿ ಅಧಿಕಾರಿಯ ರೂಪದಲ್ಲಿ ದಾಳಿ ನಡೆಸಿ 3 ಕೋಟಿ ರೂ. ಸುಲಿಗೆ ಮಾಡಿದ್ದ ಪ್ರಕರಣದ ಪ್ರಮುಖ ಮಾಸ್ಟರ್ ಮೈಂಡ್ ಅನ್ನು ಬಂಧಿಸಲಾಗಿದೆ. ಪೋಲೀಸ್ ಎ.ಎಸ್.ಐ.ಶಫೀರ್ ಬಾಬು ಅವರನ್ನು ಅಮಾನತುಗೊಳಿಸಲಾಗಿದೆ. ಅವರನ್ನು ಕರ್ನಾಟಕ ಪೋಲೀಸರು ಶನಿವಾರ ಬಂಧಿಸಿದ್ದರು.
ತ್ರಿಶೂರ್ ಗ್ರಾಮೀಣ ಜಿಲ್ಲಾ ಪೋಲೀಸ್ ಮುಖ್ಯಸ್ಥ ಬಿ. ಕೃಷ್ಣಕುಮಾರ್ ಅಮಾನತು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಪೋಲೀಸರು ಶನಿವಾರ ಆತನನ್ನು ಇರಿಂಞಲಕುಡ ಪೋಲೀಸ್ ಕ್ವಾರ್ಟರ್ಸ್‍ನಿಂದ ಬಂಧಿಸಿದರು. ವಂಚನೆ ತಂಡದಲ್ಲಿ ಶಫೀರ್ ಬಾಬು ಸೇರಿದಂತೆ ಆರು ಜನರಿದ್ದರು.
ಅವರು ಇಡಿ ಅಧಿಕಾರಿಗಳಂತೆ ವೇಷ ಧರಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮನೆಯೊಂದಕ್ಕೆ ತೆರಳಿ, ನಕಲಿ ಶೋಧ ನಡೆಸಿ, ಮನೆಯಿಂದ ಸುಮಾರು 3.5 ಕೋಟಿ ರೂ.ಗಳನ್ನು ಕಳವುಗೈದಿದ್ದರು. ಪರಿಶೀಲಿಸಿದ ನಂತರವೇ ಕುಟುಂಬಕ್ಕೆ ತಾವು ವಂಚನೆಗೊಳಗಾಗಿರುವುದು ಅರಿವಾಯಿತು. ಕೂಡಲೇ ಪೋಲೀಸರಿಗೆ ದೂರು ನೀಡಲಾಯಿತು. ದಕ್ಷಿಣ ಕನ್ನಡ ಪೋಲೀಸ್ ಅಧಿಕಾರಿಗಳು ನಡೆಸಿದ ವಿವರವಾದ ತನಿಖೆಯ ಭಾಗವಾಗಿ, ಶಫೀರ್ ಬಾಬು ಅವರನ್ನು ಇರಿಂಞಲಕುಡ ಪೋಲೀಸ್ ಕ್ವಾರ್ಟರ್ಸ್‍ನಲ್ಲಿ ಶೋಧಿಸಲಾಯಿತು. ಶಶೀರ್ ಬಾಬು ಬಂಧನದ ನಂತರ, ಪೋಲೀಸರು ಆತನೊಂದಿಗೆ ಆರು ಜನರನ್ನು ವಶಕ್ಕೆ ಪಡೆದರು.
ಶಫೀರ್ ಬಾಬು ಈ ಹಿಂದೆ ಆರ್ಥಿಕ ದುರುಪಯೋಗ ಪ್ರಕರಣದಲ್ಲಿ ಭಾಗಿಯಾಗಿದ್ದರು. ಕರ್ನಾಟಕ ಸ್ಪೀಕರ್ ಅವರ ಸಂಬಂಧಿ, ಮ್ಯಾಚ್ ಮೇಕರ್ ಒಬ್ಬರ ಮನೆಯಲ್ಲಿ ಶೋಧ ನಡೆಸಲಾಗಿತ್ತು.






