ಮಂಜೇಶ್ವರ: ಕಯ್ಯಾರು ಸೊಂದಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಉತ್ಸವದ ಪ್ರಯುಕ್ತ ಮೂಡಂಬೈಲಿನ ವಾಗ್ದೇವೀ ಯಕ್ಷಗಾನ ಕಲಾಸಂಘದಿಂದ 'ಶ್ರೀಕೃಷ್ಣ ಕಾರುಣ್ಯ'ಎಂಬ ಕಥಾಭಾಗದ ತಾಳಮದ್ದಳೆ ಜರಗಿತು.
ಪಾತ್ರವರ್ಗದಲ್ಲಿ ಸಂಜೀವ ಶೆಟ್ಟಿ ಚಟ್ಲ, ನಾರಾಯಣ ಪೂಜಾರಿ ಬೆಜ್ಜಂಗಳ, ನಾರಾಯಣ ನಾವಡ ಮೂಡಂಬೈಲು, ವೇಣುಗೋಪಾಲ ಶೆಟ್ಟಿ ಮೀನಾರು, ವಿನಯ್ ಮೀಯಪದವು, ಶಾಶ್ವತಿ ಯನ್. ನಾವಡ ಮೂಡಂಬೈಲು ಹಾಗೂ ಶಾರ್ವರಿ ಯನ್ ನಾವಡ ಮೂಡಂಬೈಲು ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಶುಭಾನಂದ ಶೆಟ್ಟಿ ಕುಳೂರು, ಚೆಂಡೆಯಲ್ಲಿ ರಾಜಾರಾಮ ಬಲ್ಲಾಳ್ ಚಿಪ್ಪಾರು ಮತ್ತು ಮೃದಂಗದಲ್ಲಿ ಸ್ಕಂದರಾಜ್ ಮಯ್ಯ ವರ್ಕಾಡಿ ಸಹಕರಿಸಿದರು.

.jpg)


