HEALTH TIPS

ಇಂಡೊನೇಷ್ಯಾ: ಸಲಿಂಗಕಾಮಿಗಳಿಗೆ ಚಡಿಯೇಟು

ಬಂದಾ ಆಚೆ: ಇಂಡೊನೇಷ್ಯಾದ ಸಂಪ್ರದಾಯವಾದಿ 'ಆಚೆ' ಪ್ರಾಂತ್ಯದ ಇಸ್ಲಾಮಿಕ್ ಷರಿಯಾ ನ್ಯಾಯಾಲಯವು, ಸಲಿಂಗಕಾಮಿಗಳಿಬ್ಬರಿಗೆ ಸಾರ್ವಜನಿಕವಾಗಿ ಚಡಿಯೇಟಿನ ಶಿಕ್ಷೆ ವಿಧಿಸಿದೆ.

24 ವಯಸ್ಸಿನ ಹಾಗೂ 18 ವಯಸ್ಸಿನ ವಿದ್ಯಾರ್ಥಿಗಳಿಬ್ಬರು ಸಲಿಂಗಕಾಮಿ ಲೈಂಗಿಕತೆ ಹೊಂದಿದ್ದಾರೆ ಎಂಬುದು ಸಾಬೀತಾಗಿದ್ದರಿಂದ, ಈ ಇಬ್ಬರಿಗೂ ಕ್ರಮವಾಗಿ 85, 80 ಚಡಿ ಏಟುಗಳನ್ನು ಸಾರ್ವಜನಿಕವಾಗಿ ನೀಡಬೇಕು ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.

ಸಲಿಂಗ ಸಂಬಂಧ ಹೊಂದಿದ್ದಾರೆ ಎಂಬ ಆರೋಪದಡಿ ಈ ಇಬ್ಬರನ್ನೂ ಕಳೆದ ನ. 7ರಂದು ಬಂಧಿಸಲಾಗಿತ್ತು.

ಪ್ರಾಂತೀಯ ರಾಜಧಾನಿ ಬಂದಾ ಆಚೆಯಲ್ಲಿ ಬಾಡಿಗೆ ಕೊಠಡಿಯೊಂದರಲ್ಲಿ ಈ ಇಬ್ಬರೂ ವಾಸವಿದ್ದರು. ಸಲಿಂಗಕಾಮ ಹೊಂದಿದ್ದಾರೆ ಎಂಬ ಅನುಮಾನದಿಂದ ನೆರೆಯವರು ಇವರ ಕೊಠಡಿಗೆ ನುಗ್ಗಿದಾಗ, ಯುವಕರು ಬೆತ್ತಲೆಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries