ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಯಲ್ಲಿನ ವಾರ್ಡುಗಳ ಕರಡು ವಿಂಗಡಣೆಗೆ ಸಂಬಂಧಿಸಿದಂತೆ ಲಭ್ಯವಿರುವ ಕುಂದುಕೊರತೆಗಳ ಕುರಿತು ರಾಜ್ಯ ಡಿಲಿಮಿಟೇಶನ್ ಆಯೋಗದ ವಿಚಾರಣೆ
ಕಾಸರಗೋಡು ನಗರಸಭಾಂಗಣದಲ್ಲಿ ಜರುಗಿತು.
ಆಯೋಗದ ಅಧ್ಯಕ್ಷ ಎ.ಶಹಜಹಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಚುನಾವಣಾ ಉಸ್ತುವಾರಿಯಾಗಿರುವ ಎಡಿಎಂ ಪಿ.ಅಖಿಲ್ ಉಪಸ್ಥಿತರಿದ್ದರು. ನಿಗದಿತ ಕಾಲಾವಧಿಗೆ ಮೊದಲು ವಾರ್ಡುಗಳ ಯಾ ವಿಧಾನಸಭಾ ಕ್ಷೇತ್ರಗಳ ಕರಡು ವಿಂಗಡಣೆ ಪ್ರಸ್ತಾವನೆಗಳ ಕುರಿತು ತಮ್ಮ ಆಕ್ಷೇಪಣೆಗಳು ಮತ್ತು ಅಭಿಪ್ರಾಯಗಳನ್ನು ಸಲ್ಲಿಸಿದವರು ವಿಚಾರಣೆಗೆ ಹಾಜರಾಗಿದ್ದರು.
ಕಾಸರಗೋಡು ಮತ್ತು ಕಾರಡ್ಕ ಬ್ಲಾಕ್‍ಗಳ, ಗ್ರಾಮ ಪಂಚಾಯಿತಿ ಮತ್ತು ಕಾಸರಗೋಡು ನಗರಸಭೆಯ ಆಯ್ದ 311 ಅರ್ಜಿಗಳೊಂದಿಗೆ ಅರ್ಜಿದಾರರು ತಮ್ಮ ಆಕ್ಷೇಪಣೆಗಳು ಮತ್ತು ಅಭಿಪ್ರಾಯಗಳನ್ನು ಸಲ್ಲಿಸಿದರು.



