HEALTH TIPS

ಇಚ್ಲಂಗೋಡು ಎ.ಎಲ್.ಪಿ.ಶಾಲಾ ವಾರ್ಷಿಕೋತ್ಸವ, ಬೀಳ್ಕೊಡುಗೆ ಸಮಾರಂಭ

ಕುಂಬಳೆ: ಶಾಲಾ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭ ಇಚ್ಲಂಪಾಡಿಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ದಿವಾಕರ ಆಳ್ವ  ಧ್ವಜಾರೋಹಣ ನಡೆಸಿ, ರ್ಕಾಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.  

ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ಉದ್ಘಾಟಿಸಿದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ರಾಜಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿದ್ಯಾರ್ಥಿಗಳ ಸ್ವ ರಚನೆಯ ಸಂಚಿಕೆ'ಸೃಷ್ಟಿ" ಪುಸ್ತಿಕೆಯನ್ನು ಉಪಜಿಲ್ಲಾ ಶಿಕ್ಷಣಾಧಿಖಾರಿ ರಾಜಗೋಪಾಲ ಬಿಡುಗಡೆಗೊಳಿಸಿದರು.


ಮಂಜೇಶ್ವರ ಬಿಆರ್‍ಸಿ ಕೋರ್ಡಿನೇಟರ್ ತಿಲಕ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ದಿವಾಕರ ಆಳ್ವ, ಕಾರ್ಯದರ್ಶಿ ಎಂ.ಆರ್ ಕೊರಗಪ್ಪ ಶೆಟ್ಟಿ,  ಗ್ರಾಪಂ ಮಾಜಿ ಸದಸ್ಯೆ ಜಯಂತಿ ಶೆಟ್ಟಿ, ನಿವೃತ್ತ ಮುಖ್ಯ ಶೀಕ್ಷಕ ಭೋಜ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಧೀಶ್ಚಂದ್ರ ಶೆಟ್ಟಿ, ಗೋಪಾಲಕೃಷ್ಣ ಮಾಸ್ಟರ್ ಪಂಜತ್ತೊಟ್ಟಿ, ಪೆÇಯ್ಯೆ ರಾಧಾಕೃಷ್ಣ, ಶಾಲಾ ಮುಖ್ಯ ಶಿಕ್ಷಕಿ ಭಾರತಿ ಉಪಸ್ಥಿತರಿದ್ದರು. 

ಶಿಕ್ಷಕ ಜಯರಾಮ ಸ್ವಾಗತಿಸಿದರು. ಶಾಲಾ ಶಿಕ್ಷಕಿ ದೀಕ್ಷಿತಾ ವರದಿ ವಾಚಿಸಿದರು. ಶಿಕ್ಷಕ ಕೃಷ್ಣಮೋಹನ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರಜೀನಾ ಬೀಗಂ ವಂದಿಸಿದರು. ಈ ಸಂದರ್ಭದಲ್ಲಿ 2024-25 ನೇ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗಲಿರುವ ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್, ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ರಾಜಗೋಪಾಲ ಮತ್ತು ಶಾಲಾ ಮುಖ್ಯ ಶಿಕ್ಷಕಿ ಭಾರತಿ ಅವರನ್ನು ಗೌರವಿಸಲಾಯಿತು.  ಶಾಲಾ ವಿದ್ಯಾರ್ಥಿಘಳು ಹಾಗೂ ಹಳೇ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries