ವಾಷಿಂಗ್ಟನ್: ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯುರೋ ಆಫ್ ಇನ್‌ವೆಸ್ಟಿಗೇಷನ್ (ಎಫ್‌ಬಿಐ) ನಿರ್ದೇಶಕರಾಗಿ ಭಾರತ ಮೂಲದ ಕಾಶ್ ಪಟೇಲ್ ನೇಮಕಗೊಂಡಿದ್ದಾರೆ.
ಎಫ್‌ಬಿಐನ 9ನೇ ನಿರ್ದೇಶಕರಾಗಿ ಕಾಶ್ ಪಟೇಲ್ ಅವರನ್ನು ನೇಮಕಗೊಳಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿದ್ದಾರೆ ಎಂದು ಯುಎಸ್ ಸೆನೆಟ್ ಖಚಿತಪಡಿಸಿದೆ.
ಪಟೇಲ್, ಟ್ರಂಪ್ ಅವರ ನಿಷ್ಠಾವಂತ ಎಂದೇ ಗುರುತಿಸಲಾಗಿದೆ. ಸೆನೆಟ್‌ನಲ್ಲಿ ನಿರ್ದೇಶಕರ ಹುದ್ದೆಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪಟೇಲ್ 51 ಪರ ಮತ್ತು 49 ವಿರೋಧ ಮತಗಳನ್ನು ಪಡೆದಿದ್ದರು.
ಈವರೆಗೆ ಎಫ್‌ಬಿಐ ಮುಖ್ಯಸ್ಥರಾಗಿದ್ದ ಕ್ರಿಸ್ಟೋಫರ್ ವ್ರೇ ಅವರ ಜಾಗಕ್ಕೆ ಈಗ ಪಟೇಲ್ ನೇಮಕಗೊಂಡಿದ್ದಾರೆ.




