ಪೆರ್ಲ : ಮಣಿಯಂಪಾರೆ ಸಂತ ಲಾರೆನ್ಸ್ ಚರ್ಚಿನ ವಾರ್ಷಿಕ ಹಬ್ಬ ಬುಧವಾರ ಆರಂಭಗೊಂಡಿದ್ದು, ಇದರ ಪೂರ್ವಭಾವಿಯಾಗಿ ಪರಮ ಪ್ರಸಾದದ ಮೆರವಣಿಗೆ ಭಾನುವಾರ ಬೆಳಗ್ಗೆ ನಡೆಯಿತು. ಇಗರ್ಜಿ ಪರಿಸರದಿಂದ ಹೊರಟ ಮೆರವಣಿಗೆಯಲ್ಲಿ ಬ್ಯಾಂಡ್ ವಾದ್ಯ ಮೇಳಗಳೊಂದಿಗೆ ಗಾಯನ ಮಂಡಳಿ, ಚರ್ಚ್ ಆಡಳಿತ ಸಮಿತಿ, ಐಸಿವೈಎಂ,ಮಹಿಳಾ ಸಮಿತಿ ಸಹಿತ ವಿವಿಧ ವಾಳೆಯ ಭಕ್ತರು ಭಾಗವಹಿಸಿದ್ದರು. ಮಂಗಳೂರಿನ ರೆ.ಫಾ.ಪ್ರವೀಣ್ ಜೊಯ್ ಸಲ್ದಾನ ದಿವ್ಯ ಬಲಿ ಪೂಜೆ ನೇರೆವೇರಿಸಿದರು. ಬುಧವಾರ ಬೆಳಿಗ್ಗೆ ವಾರ್ಷಿಕ ಹಬ್ಬದ ಸಂಭ್ರಮಿಕ ಬಲಿ ಪೂಜೆ ನಡೆಯಿತು.

.jpg)
