ತಿರುವನಂತಪುರಂ: ತೈಕಾಡ್ ಸರ್ಕಾರಿ ಮಾದರಿ ಎಚ್.ಎಸ್.ಎಲ್.ಪಿ. ಶಾಲಾ ವಿದ್ಯಾರ್ಥಿಗಳು ನಿರ್ಮಿಸಿರುವ ತೋಟದಿಂದ ತರಕಾರಿಗಳು ಕಳ್ಳತನವಾಗಿರುವ ಬಗ್ಗೆ ಮಕ್ಕಳು ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಅವರಿಗೆ ಪತ್ರ ಬರೆದಿದ್ದಾರೆ. ಮಧ್ಯಾಹ್ನದ ಊಟಕ್ಕೆ ಬೆಳೆದ ತರಕಾರಿಗಳು ಕದ್ದಿರುವುದಾಗಿ ಪತ್ರದಲ್ಲಿ ಅವಲತ್ತುಕೊಳ್ಳಲಾಗಿದೆ.
ಕಳ್ಳನನ್ನು ಹುಡುಕಲು ಶಾಲೆಯಲ್ಲಿ ಸಿಸಿಟಿವಿ ಅಳವಡಿಸುವಂತೆ ಮಕ್ಕಳು ಪತ್ರದಲ್ಲಿ ಸಚಿವರನ್ನು ಕೇಳಿಕೊಂಡಿದ್ದಾರೆ. ಆ ಪತ್ರವನ್ನು ಇಬ್ಬರು ವಿದ್ಯಾರ್ಥಿ ಶಾಲಾ ನಾಯಕರು ಬರೆದಿದ್ದಾರೆ.
ಈ ಮಧ್ಯೆ, ಸಚಿವ ವಿ.ಶಿವನ್‍ಕುಟ್ಟಿ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಕ್ರಿಯಿಸಿದ್ದು, ಘಟನೆಯ ಬಗ್ಗೆ ಪೋಲೀಸ್ ತನಿಖೆ ನಡೆಯುತ್ತಿದೆ. ಸಚಿವರು ನೀಡಿದ ಪ್ರತಿಕ್ರಿಯೆಯಲ್ಲಿ ಮಕ್ಕಳು ಬರೆದ ಪತ್ರವೂ ಸೇರಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಶಿಕ್ಷಣ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಮಕ್ಕಳು ಚಿಂತಿಸಬಾರದು ಎಂದು ಸಚಿವರು ಭರವಸೆ ನೀಡಿರುವರು.





