ನಮ್ಮ ಭೂಮಿಯೂ ಅಸಂಖ್ಯಾತ ರಹಸ್ಯಗಳಿಂದ ಕೂಡಿದೆ. ಪ್ರತಿದಿನ ಭೂಮಿಯ ಬಗ್ಗೆ ವಿವಿಧ ರೀತಿಯ ಮಾಹಿತಿ ಹೊರ ಬೀಳುತ್ತನೆ ಇರುತ್ತದೆ. ಅಲ್ಲದೆ, ನೀರು ಇಲ್ಲದ ಪ್ರದೇಶದಲ್ಲಿ ಪ್ರಾಣಿಗಳು ಬದುಕುತ್ತವೆ ಎಂಬ ನಂಬಲರ್ಹ ಅಸಾಧ್ಯತೆಗಳು ಕೂಡ ಸಾಧ್ಯವಾಗಿವೆ. ಇದೀಗ ವಿಜ್ಞಾನಿಗಳು ಭೂಮಿಯ ಆಳವಾದ ಸ್ಥಳವೊಂದನ್ನು ಕಂಡುಕೊಂಡಿದ್ದು, ಸ್ಥಳದ ಅಧ್ಯಯನವನ್ನು ಮಾಡುತ್ತಿದೆ.
ಹೌದು, ಸಾಗರ(ಸಮುದ್ರ)ದ ಆಳದಲ್ಲಿ ಬೃಹತ್ ರಂಧ್ರವೊಂದನ್ನು ಕಂಡುಹಿಡಿದ್ದಾರೆ. ಅದರ ಆಳ ಏನು ಎಂಬುವುದದನ್ನು ಇದುವರೆಗೂ ಅಳೆಯಲು ಸಾಧ್ಯವಾಗಿಲ್ಲ. ಅಲ್ಲದೆ, ಅದರ ಅಧ್ಯಯನ ಇಂದಿಗೂ ಮುಂದುವರೆದಿದೆ. ವಿಜ್ಞಾನಿಗಳು ಅದಕ್ಕೆ 'ಚಾಲೆಂಜರ್ ಡೀಪ್' ಎಂದು ಹೆಸರಿಸಿದ್ದಾರೆ. ಇದರ ಆಳವನ್ನು ಆಳೆಯಲು ಇನ್ನು ಸಾಕಷ್ಟು ಸಮಯ ಬೇಕು ಎಂದು ವಿಜ್ಞಾನಿಗಳೇ ವಿವರಿಸಿದ್ದಾರೆ.
ಇದು ಫೆಸಿಪಿಕ್ ಮಹಾಸಾಗರದ ಕೆಳಗಿರುವ ಮರಿಯಾನ ಕಂದಕದ ದಕ್ಷಿಣ ತುದಿಯಲ್ಲಿ ಈ ಚಾಲೆಂಜರ್ ಡೀಪ್ ಪತ್ತೆಯಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಅಂದಾಜು 36 ಸಾವಿರ ಅಡಿ ಆಳವಿದೆ ಎಂದು ಲೆಕ್ಕ ಹಾಕಲಾಗಿದೆ. ಆದರೆ, ನಿಖರ ಆಳತೆ ಇಲ್ಲ. ಇದರೊಳಗೆ ಹಲವು ಬಾರಿ ಅನೇಕ ವಿಜ್ಞಾನಿಗಳು ಪ್ರಯತ್ನಿಸಿದ್ದಾರೆ. ಇದುವರೆಗೂ ಆಳದ ಒಳಗೆ ಹೊಗಲು ವಿಫಲರಾಗಿದ್ದಾರೆ.
ಸಂಪೂರ್ಣ ಕತ್ತೆಯಲ್ಲಿರುವ ಚಾಲೆಂಜರ್ ಡೀಪ್
ಫೆಸಿಪಿಕ್ ಮಹಾಸಾಗರದ ಈ ಪ್ರದೇಶದಲ್ಲಿ ಸಂಪೂರ್ಣ ಕತ್ತಲೆ ಅವರಿಸಿದೆ ಎನ್ನುತಾರೆ ವಿಜ್ಞಾನಿಗಳು. ಈ ಆಳವಾದ ಸ್ಥಳದಲ್ಲಿ ಜೀವಿಗಳು ಇದೆಯೇ ಅಥವಾ ಇಲ್ಲವೇ ಎಂಬ ಕೂತುಹಲದಿಂದ ಇದನ್ನು ಅಧ್ಯಯನ ಮಾಡುತ್ತಿದ್ದಾರೆ. ಏಕೆಂದರೆ ಹೆಚ್ಚಿನ ಸಮುದ್ರ ಜೀವಿಗಳು ಬೆಳಕು ಇರುವಂತಹ ಸ್ಥಳಗಳಲ್ಲಿ ವಾಸಿಸುತ್ತವೆ, ಆದರೆ, ಚಾಲೆಂಜರ್ ಡೀಪ್ನಲ್ಲಿ ಸಂಪೂರ್ಣ ಕತ್ತಲೆ ಇರುತ್ತದೆ. ಇಲ್ಲಿ ಕತ್ತಲೆಯಿಂದಾಗಿ ಈ ಸ್ಥಳಕ್ಕೆ ತಲುಪಲು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ.
ಹಲವು ಬಾರಿ ಆಳಕ್ಕೆ ಹೋಗಲು ಪ್ರಯತ್ನ
ಈ ಚಾಲೆಂಜರ್ ಡೀಪ್ ಬಗ್ಗೆ ಮೊದಲ ಬಾರಿಗೆ ವಿಜ್ನಾನಿಗಳು 1875ರಲ್ಲಿ ಕಂಡುಕೊಂಡಿದ್ದಾರೆ. ಅಲ್ಲಿಂದ ಹಲವು ಬಾರಿ ಆಳದ ಬಗ್ಗೆ ಅರಿಯಲು ಪ್ರಯತ್ನಪಟ್ಟಿದ್ದಾರೆ. ಇದುವರೆಗೂ ಎಲ್ಲ ಪ್ರಯತ್ನಗಳು ವಿಫಲಗೊಂಡಿವೆ. ಇದರ ಆಳವನನ್ನು ಇಂದಿಗೂ ಆಳೆಯಲು ಕಷ್ಟ ಸಾಧ್ಯವಾಗಿದೆ.