ಸಮರಸ ಚಿತ್ರಸುದ್ದಿ: ಕುಂಬಳೆ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಮುಖ್ಯ ಕಛೇರಿ ಇರುವ ಸೂರಂಬೈಲು, ಶಾಖೆಗಳಿರುವ ಸೀತಾಂಗೋಳಿ, ಕಳತ್ತೂರು ಎಂಬೆರಡು ಕಛೇರಿಗಳ ಪರಿಸರದಲ್ಲಿ ಬೀದಿದೀಪಗಳನ್ನು ಅಳವಡಿಸಲು ಆಗ್ರಹಿಸಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅವರಿಗೆ ಇತ್ತೀಚೆಗೆ ಮನವಿಯನ್ನು ಸಲ್ಲಿಸಲಾಯಿತು.
ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಿ.ಕೆ.ಶ್ಯಾಮರಾಜ್ ದೊಡ್ಡಮಾಣಿ ಮನವಿ ಸಲ್ಲಿಸಿದರು. ಬ್ಯಾಂಕಿನ ನಿರ್ದೇಶಕರಾದ ಶ್ರೀಕೃಷ್ಣಪ್ರಸಾದ್, ನಟೇಶ ಕುಮಾರ್ ಮದನಗುಳಿ, ಬಿಜು ಉಪಸ್ಥಿತರಿದ್ದರು.




.jpg)

