ಸಂಸತ್ತಿನ ಬಜೆಟ್ ಅಧಿವೇಶನ ಆರಂಭ ದಿನವಾದ ಇಂದು ರಾಷ್ಟ್ರಪತಿಗಳ ಭಾಷಣ ನಂತರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನ ಉಭಯ ಸದನಗಳಲ್ಲಿ 2024-25ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.
ಆರ್ಥಿಕ ಸಮೀಕ್ಷೆ 2025 ರ 8 ಪ್ರಮುಖ ಅಂಶಗಳು:
1. ಭಾರತದ ಆರ್ಥಿಕತೆ ಸ್ಥಿರವಾಗಿರುತ್ತದೆ: ಈ ಸಮೀಕ್ಷೆಯು 2025-26ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯನ್ನು 6.3% ಮತ್ತು 6.8% ರ ನಡುವೆ ಇರಬಹುದೆಂದು ಹಾಗೂ ಜಿಎಸ್‌ಟಿ ಸಂಗ್ರಹವು 11 % ರಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
2. ಎಲ್ಲಾ ಕ್ಷೇತ್ರಗಳ ಬೆಳವಣಿಗೆಗೆ ಕೊಡುಗೆ: ಎಲ್ಲ ಕ್ಷೇತ್ರಗಳು ಉತ್ತಮ ಸಾಧನೆ ಮಾಡುತ್ತಿವೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಕೃಷಿ ವಲಯವು ಬಲವಾಗಿ ಉಳಿದಿದೆ, ಸ್ಥಿರವಾಗಿ ಪ್ರವೃತ್ತಿ ಮಟ್ಟಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೈಗಾರಿಕಾ ವಲಯವು ಮತ್ತಷ್ಟು ಪ್ರಗತಿ ಸಾಧಿಸಿದೆ.
3. ಹಣದುಬ್ಬರ: 2023-24 ರ ಹಣಕಾಸು ವರ್ಷದಲ್ಲಿ ಚಿಲ್ಲರೆ ಮುಖ್ಯ ಹಣದುಬ್ಬರವು 5.4% ರಿಂದ 2024-25 ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ 4.9% ಕ್ಕೆ ಇಳಿದಿದೆ.
4. FPI, FDI: 2024-25ರಲ್ಲಿ ಇಲ್ಲಿಯವರೆಗೆ ವಿದೇಶಿ ಬಂಡವಾಳ ಹೂಡಿಕೆಗಳು (FPI) ಮಿಶ್ರ ಪ್ರವೃತ್ತಿಯನ್ನು ತೋರಿಸಿವೆ. ಜಾಗತಿಕ ಮಾರುಕಟ್ಟೆಗಳಲ್ಲಿನ ಅನಿಶ್ಚಿತತೆ ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರಿಂದ ಲಾಭ ಗಳಿಸುವುದು ಬಂಡವಾಳದ ಹೊರಹರಿವಿಗೆ ಕಾರಣವಾಯಿತು. ಈ ನಡುವೆ ಒಟ್ಟು ವಿದೇಶಿ ನೇರ ಹೂಡಿಕೆಯ (FDI) ಒಳಹರಿವು 2024-25ರ ಮೊದಲ ಎಂಟು ತಿಂಗಳುಗಳಲ್ಲಿ ಚೇತರಿಕೆಯ ಲಕ್ಷಣಗಳನ್ನು ತೋರಿಸಿದೆ, ಆದರೂ ನಿವ್ವಳ ಎಫ್‌ಡಿಐ ಒಳಹರಿವು ಎಪ್ರಿಲ್-ನವೆಂಬರ್ 2023 ಕ್ಕೆ ಹೋಲಿಸಿದರೆ ವಾಪಸಾತಿ/ಹೂಡಿಕೆಯಲ್ಲಿನ ಏರಿಕೆಯಿಂದಾಗಿ ಕಡಿಮೆಯಾಗಿದೆ.
5. ವಿದೇಶೀ ವಿನಿಮಯ: ಆರ್ಥಿಕ ಸಮೀಕ್ಷೆಯು ಭಾರತದ ವಿದೇಶೀ ವಿನಿಮಯ ಸಂಗ್ರಹವು 2024 ರ ಸೆಪ್ಟೆಂಬರ್ ನಲ್ಲಿ $706 ಶತಕೋಟಿಯಷ್ಟಿತ್ತು ಮತ್ತು ಡಿಸೆಂಬರ್ 27 ವೇಳೆಗೆ $640.3 ಶತಕೋಟಿಯಷ್ಟಿತ್ತು, ಇದು 89.9% ಬಾಹ್ಯ ಸಾಲವನ್ನು ಒಳಗೊಂಡಿದೆ.
6. ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರ: ಸಮೀಕ್ಷೆಯ ಪ್ರಕಾರ, ವಾಣಿಜ್ಯ ಬ್ಯಾಂಕುಗಳು ತಮ್ಮ ಒಟ್ಟು ಅನುತ್ಪಾದಕ ಆಸ್ತಿಗಳ (GNPA) ಅನುಪಾತದಲ್ಲಿ FY18 ರಲ್ಲಿನ ಗರಿಷ್ಠ ಮಟ್ಟದಿಂದ ಸೆಪ್ಟೆಂಬರ್ 2024 ರ ಅಂತ್ಯದ ವೇಳೆಗೆ 2.6 % ಕ್ಕೆ ಸ್ಥಿರವಾದ ಕುಸಿತವನ್ನು ವರದಿ ಮಾಡಿದೆ.
7. ರಫ್ತು: FY25 ರ ಮೊದಲ ಒಂಬತ್ತು ತಿಂಗಳುಗಳಲ್ಲಿ ಭಾರತದ ಒಟ್ಟು ರಫ್ತುಗಳು (ಮಾರುಕ ಮತ್ತು ಸೇವೆಗಳು) USD 602.6 ಶತಕೋಟಿ (ಶೇ. 6) ಅನ್ನು ತಲುಪುವ ಸ್ಥಿರ ಬೆಳವಣಿಗೆಯನ್ನು ದಾಖಲಿಸಿವೆ. ಪೆಟ್ರೋಲಿಯಂ ಮತ್ತು ರತ್ನಗಳು ಮತ್ತು ಆಭರಣಗಳನ್ನು ಹೊರತುಪಡಿಸಿ ಸೇವೆಗಳು ಮತ್ತು ಸರಕುಗಳ ರಫ್ತುಗಳು 10.4 % ರಷ್ಟು ಬೆಳವಣಿಗೆ ದಾಖಲಿಸಿದೆ.
8. MSME: ಪ್ರಸಕ್ತ ಹಣಕಾಸು ವರ್ಷದಲ್ಲಿ 29 ನವೆಂಬರ್ 2024 ರಂತೆ ಕೃಷಿ ಸಾಲದ ಬೆಳವಣಿಗೆಯು 5.1% ಆಗಿದೆ. ಏತನ್ಮಧ್ಯೆ, ಕೈಗಾರಿಕಾ ಸಾಲದ ಬೆಳವಣಿಗೆಯು ನವೆಂಬರ್ 2024 ರ ಅಂತ್ಯದ ವೇಳೆಗೆ 4.4% ರಷ್ಟಿದೆ, ಇದು ವರ್ಷದ ಹಿಂದೆ ದಾಖಲಾದ 3.2% ಗಿಂತ ಹೆಚ್ಚಾಗಿದೆ. ಕೈಗಾರಿಕೆಗಳಾದ್ಯಂತ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಬ್ಯಾಂಕ್ ಸಾಲವು ದೊಡ್ಡ ಉದ್ಯಮಗಳಿಗೆ ಸಾಲ ವಿತರಣೆಗಿಂತ ವೇಗವಾಗಿ ಬೆಳೆಯುತ್ತಿದೆ.




