ತಿರುವನಂತಪುರ: ಪ್ರಸಕ್ತ ಸಾಲಿನ ಬಜೆಟ್ ಅನ್ನು 'ನಿರಾಶೆದಾಯಕ ಬಜೆಟ್' ಎಂದು ಸಿಪಿಐ(ಎಂ) ಶನಿವಾರ ಟೀಕಿಸಿದೆ.
ಸುದ್ದಿಗಾರರ ಜೊತೆ ಮಾತನಾಡಿದ ಸಿಪಿಐ (ಎಂ) ಸಂಸದ ಜಾನ್ ಬಿಟ್ರಾಸ್ ಕೇಂದ್ರದ ಬಜೆಟ್ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದು ಇದು ಜನಸ್ನೇಹಿ ಬಜೆಟ್ ಎಂದು ನಾವು ಹೇಳಲು ಸಾಧ್ಯವಿಲ್ಲ ಎಂದರು.
ಕೇಂದ್ರ ಸರ್ಕಾರ ಆದಾಯ ತೆರಿಗೆದಾರರ ಸಮಸ್ಯೆಗಳಲ್ಲಿ ಮಧ್ಯಪ್ರವೇಶಿಸುವ ಮೂಲಕ ಸಮಸ್ಯೆ ಹುಟ್ಟುಹಾಕಿದೆ ಎಂದು ಅವರು ಹೇಳಿದರು.
ಈ ಸಲದ ಬಜೆಟ್‌ನಲ್ಲಿಯೂ ಕೇರಳ ರಾಜ್ಯಕ್ಕೆ ಕೇಂದ್ರ ಯಾವ ನೆರವನ್ನು ಸಹ ನೀಡಿಲ್ಲ ಕೇವಲ ಆಂಧ್ರ, ಬಿಹಾರಕ್ಕೆ ಮಣೆ ಹಾಕಿದೆ ಎಂದು ಅವರು ಆರೋಪಿಸಿದರು.




