HEALTH TIPS

Union Budget 2025: ಸಣ್ಣ-ಮಧ್ಯಮ ಕೈಗಾರಿಕಾ ವಲಯಕ್ಕೆ ಉತ್ತೇಜನ, ಬೀದಿಬದಿ ವ್ಯಾಪಾರಿಗಳಿಗೆ ಯುಪಿಐ ಲಿಂಕ್ ಕ್ರೆಡಿಟ್ ಕಾರ್ಡ್!

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಕೇಂದ್ರ ಬಜೆಟ್ 2025ರಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ ಬೀದಿಬದಿ ವ್ಯಾಪರಿಗಳಿಗೆ ಯುಪಿಐ ಲಿಂಕ್ ಆಗಿರುವ ಕ್ರೆಡಿಟ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ತಮ್ಮ ಬಜೆಟ್ ಮಂಡನೆ ವೇಳೆ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 'ಭಾರತದಲ್ಲಿ ಸುಮಾರು 7.5 ಕೋಟಿ ಮಂದಿಗೆ ಮಧ್ಯಮ ವರ್ಗದ ಕೈಗಾರಿಗಳು ಉದ್ಯೋಗ ನೀಡಿವೆ. ಇವರಿಗೆ ನೆರವಾಗಲು ಸಣ್ಣ ಹಾಗೂ ಅತೀ ಸೂಕ್ಷ್ಮಿ ಉದ್ಯಮಗಳಿಗೆ ಸಾಲ ನೀಡಲು ಅವಕಾಶ ನೀಡಲಾಗುತ್ತದೆ. 5 ಕೋಟಿ ರೂ.ನಿಂದ 10 ಕೋಟಿ ರೂ.ವರೆಗೆ ಉದ್ಯಮ ಆರಂಭಿಸಲು ಸಾಲ ನೀಡಲಾಗುತ್ತದೆ. ಅಲ್ಲದೇ ಅವಧಿ ಸಾಲ ಸುಮಾರು 20 ಕೋಟಿ ರೂ. ನೀಡಲು ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೇ ಮೊದಲ ಬಾರಿಗೆ ಉದ್ಯಮ ಆರಂಭಿಸುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರಿಗೆ 2 ಕೋಟಿ ರೂ. ಸಾಲ ನೀಡುವುದಾಗಿ ನಿರ್ಮಲಾ ಸೀತರಾಮನ್ ಘೋಷಿಸಿದರು.

ಅಂತೆಯೇ ಆಮದು ಸುಂಕ ಸರಳೀಕರಣಗೊಳಿಸಿದ ಕೇಂದ್ರ ಸರಕಾರ, 15 ಹಂತಗಳ ಪೈಕಿ 7 ಹಂತಗಳ ಆಮದು ಸುಂಕ ರದ್ದು ಮಾಡಲಾಗಿದೆ. ಆರು ಅತ್ಯಾವಶ್ಯಕ ಔಷಧಗಳ ಮೇಲಿನ ಆಮದು ಸುಂಕ ರದ್ದು, ಕ್ಯಾನ್ಸರ್ ಸೇರಿ ಹಲವು ಗಂಭೀರ ಕಾಯಿಲೆಗಳ ಆಮದು ಸುಂಕಕ್ಕೂ ಕಡಿವಾಣ. ಕಳೆದ ಬಾರಿಯಂತೆ ಈ ವರ್ಷವೂ ಕ್ಯಾನ್ಸರ್ ಔಷಧದ ಕಡೆ ಹೆಚ್ಚಿನ ಗಮನ ಹರಿಸಿರು ಕೇಂದ್ರ ಸರ್ಕಾರ. ಕ್ಯಾನ್ಸರ್ ಚಿಕಿತ್ಸಕ ಔಷಧಿಗಳ ಕಚ್ಚಾ ವಸ್ತುಗಳ ಮೇಲಿನ ಆಂದು ಸುಂಕ ಕಡಿತ ಮಾಡುವುದಾಗಿ ಹೇಳಿದೆ.

ದೇಶದ ಬೆಳವಣಿಗೆಗಾಗಿ ರಫ್ತಿಗೆ ಹೆಚ್ಚು ಒತ್ತು

ದೇಶದ ಬೆಳವಣಿಗೆಗಾಗಿ ರಫ್ತನ್ನು ಉತ್ತೇಜಿಸಲು ರಫ್ತು ಉತ್ತೇಜನ ಮಿಷನ್ ಸ್ಥಾಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ನಮ್ಮ ಆರ್ಥಿಕತೆಯು ಎಲ್ಲಾ ಪ್ರಮುಖ ಆರ್ಥಿಕತೆಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಕಳೆದ 10 ವರ್ಷಗಳಲ್ಲಿ ನಮ್ಮ ಬೆಳವಣಿಗೆಯ ದಾಖಲೆ ಮತ್ತು ರಚನಾತ್ಮಕ ಸುಧಾರಣೆಗಳು ಜಾಗತಿಕ ಗಮನವನ್ನು ಸೆಳೆದಿವೆ. ಬೀದಿಬದಿ ವ್ಯಾಪರಿಗಳಿಗೆ ಯುಪಿಐ ಲಿಂಕ್ ಆಗಿರೋ ಕ್ರೆಡಿಟ್ ಕಾರ್ಡ್. ಇದರಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು, ಬ್ಯುಸಿನೆಸ್ ವಿಸ್ತರಿಸಲು ನೆರವು. ಸಾಮಾನ್ಯರ ಬದುಕು ಬಂಗಾರಗೊಳಿಸಲು ಅವಕಾಶ. ಎಲ್ಲೆಲ್ಲೋ ಬಡ್ಡಿ ಪಡೆದು, ಸಂಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳಲು ಸರಕಾರದ ನೆರವು ನೀಡಲವಾಗುತ್ತದೆ ಎಂದರು.

ಹೂಡಿಕೆ ಮತ್ತು ವಹಿವಾಟು ಮಿತಿಗಳ ಹೆಚ್ಚಳ

ಎಲ್ಲಾ ಎಂಎಸ್‌ಎಂಇಗಳ ವರ್ಗೀಕರಣಕ್ಕಾಗಿ ಹೂಡಿಕೆ ಮತ್ತು ವಹಿವಾಟು ಮಿತಿಗಳನ್ನು ಕ್ರಮವಾಗಿ 2.5 ಮತ್ತು 2 ಪಟ್ಟು ಹೆಚ್ಚಿಸಲಾಗುವುದು. ಇದು ನಮ್ಮ ಯುವಕರಿಗೆ ಬೆಳೆಯುವ ಮತ್ತು ಉದ್ಯೋಗವನ್ನು ಸೃಷ್ಟಿಸುವ ವಿಶ್ವಾಸವನ್ನು ನೀಡುತ್ತದೆ ಎಂದು ಸೀತಾರಾಮನ್ ಹೇಳಿದ್ದಾರೆ. ಎಸ್‌ಸಿ/ಎಸ್‌ಟಿ ಸಮುದಾಯಗಳ 5 ಲಕ್ಷ ಮಹಿಳೆಯರಿಗೆ ಲಾಭದಾಯಕವಾಗುವಂತೆ ಐದು ವರ್ಷಗಳ ಅವಧಿಯೊಂದಿಗೆ ಟರ್ಮ್ ಲೋನ್‌ಗಳನ್ನು ನೀಡಲು ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಆಟಿಕೆಗಳ ತಯಾರಿಕೆಗೆ ಒತ್ತು

ಗೊಂಬೆ ಉತ್ತಾದನೆಗೆ ಹೆಚ್ಚು ಒತ್ತು ನೀಡುವುದಾಗಿ ಘೋಷಿಸಿರುವ ನಿರ್ಮಲಾ ಸೀತರಾಮನ್, ಇದಕ್ಕಾಗೆ ರಾಷ್ಟ್ರೀಯ ಕ್ರೀಯಾ ಯೋಜನೆ ಮಾಡುವುದಾಗಿ ಹೇಳಿದ್ದಾರೆ. ಜಾಗತಿಕವಾಗಿ ಭಾರತದ ಗೊಂಬೆಗಳಿಗೆ ಹೆಚ್ಚಿನ ಮಾನ್ಯತೆ ಸಿಗುವಂತೆ ಮಾಡಲು ಯೋಜನೆ. ಮೇಕ್ ಇನ್ ಇಂಡಿಯಾ ಬ್ರ್ಯಾಂಡ್​ನೊಂದಿಗೆ ಆಟಿಕೆಗಳ ವಲಯಕ್ಕಾಗಿ, ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಸರ್ಕಾರವು ಯೋಜನೆಯನ್ನು ಜಾರಿಗೊಳಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಪಾದರಕ್ಷೆ ಹಾಗೂ ಚರ್ಮದ ಉದ್ಯಮಕ್ಕೆ ಯೋಜನೆ

ಹಣಕಾಸು ಸಚಿವರು ಭಾರತದ ಪಾದರಕ್ಷೆ ಮತ್ತು ಚರ್ಮದ ವಲಯಕ್ಕೆ ಮೀಸಲಾದ ಯೋಜನೆಯನ್ನು ಘೋಷಿಸಿದರು. ಇದು 22 ಲಕ್ಷ ವ್ಯಕ್ತಿಗಳಿಗೆ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ, 4 ಲಕ್ಷ ಕೋಟಿ ರೂ. ಆದಾಯವನ್ನು ಸಾಧಿಸುತ್ತದೆ ಮತ್ತು ರಫ್ತುಗಳನ್ನು 1.1 ಲಕ್ಷ ಕೋಟಿಗೆ ರೂ.ಗೆ ಹೆಚ್ಚಿಸುತ್ತದೆ. ಇಂಡಿಯಾ ಪೋಸ್ಟ್ ಅನ್ನು ಪ್ರಮುಖ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries