ಕೊಚ್ಚಿ: ಫೆಬ್ರವರಿಯಲ್ಲಿ ಬಿಡುಗಡೆಯಾದ 17 ಮಲೆಯಾಳಂ ಚಲಚಿತ್ರಗಳಲ್ಲಿ ಹನ್ನೊಂದು ಚಿತ್ರಗಳು ಆರ್ಥಿಕ ನಷ್ಟವನ್ನು ಅನುಭವಿಸಿವೆ ಎಂದು ವರದಿಯೊಂದು ತಿಳಿಸಿದೆ. ಚಲನಚಿತ್ರ ನಿರ್ಮಾಪಕರ ಸಂಘ ಚಲನಚಿತ್ರಗಳ ನಷ್ಟದ ಅಂಕಿಅಂಶಗಳನ್ನು ನಿನ್ನೆ ಬಹಿರಂಗಪಡಿಸಿದೆ.
ಒಂದೂವರೆ ಕೋಟಿ ರೂಪಾಯಿಗಳಿಗೂ ಹೆಚ್ಚು ವೆಚ್ಚದ ಮಲಯಾಳಂ ಚಿತ್ರ ಲವ್ ಡೇಲ್ ಚಿತ್ರಮಂದಿರಗಳಿಂದ ಕೇವಲ ಹತ್ತು ಸಾವಿರ ರೂಪಾಯಿಗಳನ್ನು ಗಳಿಸಿತು. ಕುಂಚಾಕೊ ಬೋಬನ್ ನಟಿಸಿದ 'ಆಫೀಸರ್ ಆನ್ ಡ್ಯೂಟಿ' ಮಾತ್ರ ಬ್ರೇಕಿಂಗ್ ಈವನ್‍ಗೆ ಹತ್ತಿರ ಬಂದಿತು. ನಿರ್ಮಾಪಕರ ಸಂಘವು 17 ಚಿತ್ರಗಳ ಬಜೆಟ್ ಮತ್ತು ಬಾಕ್ಸ್ ಆಫೀಸ್ ಕಲೆಕ್ಷನ್‍ಗಳನ್ನು ಬಿಡುಗಡೆ ಮಾಡಿದರು.
ಫೆಬ್ರವರಿಯಲ್ಲಿ ಬಿಡುಗಡೆಯಾದ ಚಿತ್ರಗಳಿಗೆ ಒಟ್ಟು 75 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ವರದಿ ಗಮನಸೆಳೆದಿದೆ. ಇದರಲ್ಲಿ ಕೇವಲ 23 ಕೋಟಿ 55 ಲಕ್ಷ ರೂ.ಗಳ ಆದಾಯ ಮಾತ್ರ ಲಭಿಸಿದೆ. ನಾಲ್ಕು ಚಿತ್ರಗಳು ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ. ಅವೆಲ್ಲ ಒಟಿಟಿ ಹಕ್ಕುಗಳನ್ನು ಪಡೆದರೆ, ತಮ್ಮ ಹೂಡಿಕೆಯ ಹಣವನ್ನು ಮರಳಿ ಪಡೆಯಲು ಸಾಧ್ಯವಾಗಬಹುದು.





