ನವದೆಹಲಿ: ದೇಶಿಯ ವಿಮಾನ ಜಾಲವನ್ನು ವಿಸ್ತರಿಸಲು 1,700ಕ್ಕೂ ವಿಮಾನವನ್ನು ಖರೀದಿಸಲಾಗುತ್ತಿದ್ದು, ಮುಂದಿನ 15-20 ವರ್ಷಗಳಲ್ಲಿ 30 ಸಾವಿರ ಪೈಲಟ್‌ಗಳ ಅಗತ್ಯವಿರುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ ನಾಯ್ಡು ಮಂಗಳವಾರ ಹೇಳಿದ್ದಾರೆ.
ಅಧಿಕಾರಿಗಳು 38 ತರಬೇತಿ ಸಂಸ್ಥೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಅವುಗಳಿಗೆ ರೇಟಿಂಗ್ ಕೊಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಸ್ತುತ 6 ಸಾವಿರದಿಂದ 7 ಸಾವಿರ ಪೈಲಟ್‌ಗಳು ಕೆಲಸ ಮಾಡುತ್ತಿದ್ದಾರೆ. ಭಾರತ ನಾಗರಿಕ ವಿಮಾನ ಸೇವೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣಗಳನ್ನು ವಿಭಾಗಿಸಲು ಪ್ರಯತ್ನಗಳು ನಡೆಯುತ್ತಿವೆ. ಸರಕು ಮತ್ತು ಎಫ್‌ಟಿಒಗಳಿಗೆ ಮೀಸಲಾದ ವಿಮಾನ ನಿಲ್ದಾಣಗಳನ್ನು ಹೊಂದುವ ಸಾಧ್ಯತೆಯೂ ಇದರಲ್ಲಿ ಸೇರಿದೆ ಎಂದಿದ್ದಾರೆ.




