ಮುಳ್ಳೇರಿಯ: ಕೇರಳ ಸ್ಟೇಟ್ ಲೈಬ್ರೆರಿ ಕೌನ್ಸಿಲ್ ಜಾರಿಗೊಳಿಸಿದ `ವಾಚನ ವಸಂತ' ಕಾರ್ಯಕ್ರಮದ ಉದ್ಘಾಟನೆ ಬೆಳ್ಳಿಪ್ಪಾಡಿಯ ಮಧುವಾಹಿನಿ ಗ್ರಂಥಾಲಯದಲ್ಲಿ ಗ್ರಂಥಾಲಯದಲ್ಲಿ ಇತ್ತೀಚೆಗೆ ನಡೆಯಿತು. ಮುಳಿಯಾರು ಗ್ರಾಮ ಪಂಚಾಯತಿ ಸದಸ್ಯೆ ವಿ.ಸತ್ಯಾವತಿ ಬೆಳ್ಳಿಪ್ಪಾಡಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಪೋಲೀಸ್ ಅಧಿಕಾರಿ ಸಿ.ರಮ್ಯಾ ಪ್ರಥಮ ಪುಸ್ತಕವನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಕೆ.ಜಯಚಂದ್ರನ್, ಅನಿತಾ ಕುಮಾರಿ ಇ, ಲತಾ ಚರವು, ರಾಜೇಶ್ ಪಿ.ಜಿ, ಲತಿಕಾ ಎಂ.ಮಾತನಾಡಿದರು. ಸಿ.ಕೆ.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ರಾಘವನ್ ಬೆಳ್ಳಿಪ್ಪಾಡಿ ಸ್ವಾಗತಿಸಿ, ಶೋಭಾ ಚರವು ವಂದಿಸಿದರು.




.jpg)
