ಕೊಟ್ಟಾಯಂ: ಮೋಟಾರು ವಾಹನ ಇಲಾಖೆ ನಿರೀಕ್ಷಕ ವಿದಾಯ ದಿನದಂದೇ ಕಾರಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರನ್ನು ಕೊಟ್ಟಾಯಂ ಆರ್‍ಟಿಒ ಜಾರಿ ವಿಭಾಗದ ಎಎಂವಿಐ ಗಣೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಅಡೂರ್ ಮೂಲದವರು. ಎಟ್ಟುಮನೂರಿನ ಪಟ್ಟಿತನಂನಲ್ಲಿರುವ ಅವರ ಮನೆಯ ಬಳಿ ಕಾರಿನಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ.
ನಿನ್ನೆ ಮಧ್ಯಾಹ್ನ ತೆಳ್ಳಕಂನಲ್ಲಿರುವ ಅವರ ಕಚೇರಿಯಲ್ಲಿ ಗಣೇಶ್ ಕುಮಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಅವರು ಸಮಾರಂಭಕ್ಕೆ ಬಾರದ ಕಾರಣ ಸಹೋದ್ಯೋಗಿಗಳು ಅವರನ್ನು ಹುಡುಕಲು ಮನೆಗೆ ಹೋದಾಗ, ಕಾರಿನೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದರು. ಎಟ್ಟುಮನೂರು ಪೋಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು.





