ನವದೆಹಲಿ: ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯೊಂದಿಗೆ ನಂಟು ಹೊಂದಿದ ಸಂಘಟನೆಯ ಉನ್ನತ ಮುಖಂಡನನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ಛತ್ತೀಸಗಢದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂಲವಾಸಿ ಬಚಾವೊ ಮಂಚ್ (ಎಂಬಿಎಂ)ನ ನಾಯಕ ರಾಘು ಮಿದಿಯಾಮಿ ಅವರನ್ನು ಗುರುವಾರ ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಎಂಬಿಎಂ ಸಂಘಟನೆಯನ್ನು ಛತ್ತೀಸಗಢ ಸರ್ಕಾರವು ನಿಷೇಧಿಸಿದೆ.
ಎಂಬಿಎಂ ಸಂಘಟನೆಯು ಸಿಪಿಐ (ಮಾವೋವಾದಿ) ಸಂಘಟನೆಗಾಗಿ ಹಣ ಸಂಗ್ರಹಿಸಿ, ವಿತರಿಸುವ ಕೆಲಸದಲ್ಲಿ ತೊಡಗಿಸಕೊಂಡಿತ್ತು. ಅಲ್ಲದೇ ಭಾರತ ವಿರೋಧಿ ಕಾರ್ಯದಲ್ಲಿ ತೊಡಗಿತ್ತು. ರಾಘು ನೇತೃತ್ವದಲ್ಲಿಯೇ, ಹಣ ಸಂಗ್ರಹಿಸಿ ಸ್ಥಳೀಯ ಮಟ್ಟದಲ್ಲಿ ವಿತರಿಸುವ ಕಾರ್ಯ ನಡೆಸಲಾಗುತಿತ್ತು' ಎಂದು ಎನ್‌ಐಎ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.




