HEALTH TIPS

'ಸಿಗ್ನಲ್‌' ಆಯಪ್‌ | ರಹಸ್ಯ ಮಾಹಿತಿ ಸೋರಿಕೆಯಾಗಿಲ್ಲ: ಶ್ವೇತಭವನ

ವಾಷಿಂಗ್ಟನ್: ಅಮೆರಿಕ ನಡೆಸಲು ಉದ್ದೇಶಿಸಿದ್ದ ದಾಳಿಗಳ ಕುರಿತು ರಕ್ಷಣಾ ಇಲಾಖೆ ಅಧಿಕಾರಿಗಳು 'ಸಿಗ್ನಲ್‌'ನಲ್ಲಿ ಮಾಡಿರುವ ಚಾಟ್‌ಗಳು ಸೋರಿಕೆಯಾಗಿರುವ ವಿಚಾರ ಭಾರಿ ವಿವಾದ ಸೃಷ್ಟಿಸಿದೆ.

'ಸಾರ್ವಜನಿಕವಾಗಿ ಲಭ್ಯವಿರುವ ಸಿಗ್ನಲ್‌ ಆಯಪ್‌ನಲ್ಲಿ ಹಂಚಿಕೆಯಾಗಿರುವುದು ರಹಸ್ಯ ಮಾಹಿತಿಯಲ್ಲ' ಎಂದು ಶ್ವೇತಭವನ ಹೇಳಿದೆ.

ಸರ್ಕಾರದ ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿರುವ ಡೆಮಾಕ್ರಟಿಕ್‌ ಸಂಸದರು, 'ಹೂಥಿ ಬಂಡುಕೋರರ ಮೇಲೆ ನಡೆಸಲು ಉದ್ದೇಶಿಸಿದ್ದ ದಾಳಿಗಳ ಕುರಿತ ಮಾಹಿತಿ ಸೋರಿಕೆಯಾಗಿದೆ. ಹೀಗಾಗಿ, ಇದು ರಹಸ್ಯ ಮಾಹಿತಿ ಕಾಪಾಡುವ ಕುರಿತ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ' ಎಂದಿದ್ದಾರೆ.

ಯೆಮೆನ್‌ನ ಹೂಥಿ ಬಂಡುಕೋರರನ್ನು ಗುರಿಯಾಗಿಸಿ ನಡೆಸಲು ಉದ್ದೇಶಿಸಿದ್ದ ದಾಳಿಗೆ ಸಂಬಂಧಿಸಿದ ಯೋಜನೆ ಕುರಿತು ರಾಷ್ಟ್ರೀಯ ಭದ್ರತಾ ಅಧಿಕಾರಿಗಳು ನಡೆಸಿದ್ದ ಚಾಟ್‌ಗಳು ಸೋರಿಕೆಯಾಗಿವೆ ಎನ್ನಲಾಗಿದೆ.

'ದಿ ಅಟ್ಲಾಂಟಿಕ್' ನಿಯತಕಾಲಿಕೆಯ ಪ್ರಧಾನ ಸಂಪಾದಕ ಜೆಫ್ರಿ ಗೋಲ್ಡ್‌ಬರ್ಗ್ ಅವರನ್ನು ಆಕಸ್ಮಿಕವಾಗಿ ಈ ಆಯಪ್‌ನ ಗ್ರೂಪ್‌ಗೆ ಸೇರಿಸಲಾಗಿದೆ. ಉದ್ದೇಶಿತ ದಾಳಿ ಕುರಿತ ಮೆಸೇಜ್‌ಗಳನ್ನು ಅವರು ಹಂಚಿಕೊಂಡಿದ್ದಾರೆ ಎನ್ನಲಾಗಿದ್ದು, ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಪಟೇಲ್‌ ಹೇಳಿಕೆ:

ಎಫ್‌ಬಿಐ ನಿರ್ದೇಶಕ ಪಟೇಲ್‌ ಅವರು ಈ 'ಸಿಗ್ನಲ್‌' ಆಯಪ್‌ ಬಳಕೆದಾರರಲ್ಲ. ಆದರೂ, ದಾಳಿಗಳ ಕುರಿತ ಚಾಟ್‌ಗಳು ಸೋರಿಕೆಯಾಗಿರುವುದಕ್ಕೆ ಸಂಬಂಧಿಸಿ, ಸೆನೆಟ್‌ ಹಾಗೂ ಕೆಳಮನೆಯಲ್ಲಿ (ಹೌಸ್‌ ಆಫ್‌ ರೆಪ್ರಸೆಂಟೇಟಿವ್ಸ್), ಅವರನ್ನು ಕಳೆದ ಎರಡು ದಿನಗಳಿಂದ ವಿಚಾರಣೆಗೆ ಒಳಪಡಿಸಲಾಗಿದೆ.

'ದಿ ಅಟ್ಲಾಂಟಿಕ್‌ ನಿಯತಕಾಲಿಕೆ ಪ್ರಧಾನ ಸಂಪಾದಕರಿಗೆ ಹಂಚಿಕೆಯಾಗಿರುವ ಚಾಟ್‌ಗಳನ್ನು ವೈಯಕ್ತಿಕವಾಗಿ ನಾನು ಪರಿಶೀಲಿಸಿಲ್ಲ' ಎಂದು ಪಟೇಲ್‌ ಅವರು ಸೆನೆಟ್‌ ಹಾಗೂ ಕೆಳಮನೆ ಸಮಿತಿಗಳ ಮುಂದೆ ಸಾಕ್ಷ್ಯ ನುಡಿದಿದ್ದಾರೆ.

ಟ್ರಂಪ್‌ ಪ್ರತಿಕ್ರಿಯೆ:

ಆಮದು ವಾಹನಗಳ ಮೇಲಿನ ನೂತನ ಸುಂಕ ಕುರಿತು ಘೋಷಿಸಲು ಓವಲ್‌ ಕಚೇರಿಗೆ ಆಗಮಿಸಿದ್ದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಈ ವಿಚಾರ ಕುರಿತು ಪತ್ರಕರ್ತರು ಪದೇಪದೇ ಪ್ರಶ್ನೆಗಳನ್ನು ಕೇಳಿದ್ದಾರೆ.

ಈ ಪ್ರಶ್ನೆಗಳಿಂದ ಹತಾಶೆಗೊಂಡಂತೆ ಕಂಡು ಬಂದ ಟ್ರಂಪ್‌,'ಇದು ಪಿತೂರಿ ಅಷ್ಟೆ' ಎಂದು ಪ್ರತಿಕ್ರಿಯಿಸಿದ್ದಾರೆ.

'ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಇಲ್ಲವೇ ನಿರ್ಲಕ್ಷತನದಿಂದಾಗಿ ಸೋರಿಕೆ ಮಾಡಿದವರ ವಿರುದ್ಧ ಬೇಹುಗಾರಿಕೆ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಳೆದ ಹಲವು ದಶಕಗಳಿಂದ ಎಫ್‌ಬಿಐ ಹಾಗೂ ನ್ಯಾಯಾಂಗ ಇಲಾಖೆಗಳು ಈ ಕಾಯ್ದೆಯ ಅನುಷ್ಠಾನದ ಹೊಣೆ ಹೊತ್ತಿವೆ' ಎಂದು ಹೇಳಿದ್ದಾರೆ.

'ಈಗ ರಾಷ್ಟ್ರೀಯ ಭದ್ರತೆ ಕುರಿತ ಮಾಹಿತಿ ಸಿಗ್ನಲ್‌ ಆಯಪ್‌ನಲ್ಲಿ ಸೋರಿಕೆಯಾಗಿದೆ. ಈ ಆಯಪ್‌ ಮೂಲಕ ರಹಸ್ಯ ಮಾಹಿತಿ ಹಂಚಿಕೊಳ್ಳುವುದನ್ನು ಎಫ್‌ಬಿಐ ಅನುಮೋದಿಸುವುದಿಲ್ಲ. ಇದು ಎಫ್‌ಬಿಐನ ಕೆಲಸವೂ ಅಲ್ಲ' ಎಂದು ಟ್ರಂಪ್‌ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries