HEALTH TIPS

ನಿವೃತ್ತ ಯೋಧರಿಗೆ ಮೀಸಲಿರಿಸಿದ ಜಾಗ ಕಬಳಿಕೆ-ಪ್ರಕರಣ ಬಹಿರಂಗಪಡಿಸಿದ ನಿವೃತ್ತ ಅಧಿಕಾರಿಯ ಕೊಲೆಗೆ ಯತ್ನ

ಕಾಸರಗೋಡು: ನಕಲಿ ದಾಖಲೆ ತಯಾರಿಸಿ ನಿವೃತ್ತ ಯೋಧರಿಗಾಗಿ ಮೀಸಲಿರಿಸಿದ ಜಾಗವನ್ನು ಕಬಳಿಸಲು ಯತ್ನಿಸಿದ ಪ್ರಕರಣವನ್ನು ಬಹಿರಂಗಪಡಿಸಿದ ಆರೋಪದಲ್ಲಿ ನಿವೃತ್ತ ಗ್ರಾಮಾಧಿಕಾರಿಯನ್ನು ಕಾರು ಡಿಕ್ಕಿಯಾಗಿಸಿ ಕೊಲೆಗೆ ಯತ್ನಿಸಿದ ಘಟನೆ ಪೆರ್ಮುದೆಯಲ್ಲಿ ನಡೆದಿದೆ.

ಪೈವಳಿಕೆ ಪಂಚಾಯಿತಿ ಕಯ್ಯಾರು ನಿವಾಸಿ ಮಹಮ್ಮದ್ ಕುಞÂ(60)ಗಾಯಾಳು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಮ್ಮದ್‍ಕುಞÂ ಅವರ ತಲೆ, ಕಾಲುಗಳಿಗೆ ಗಾಯಗಳುಂಟಾಗಿದೆ. ಭೂರಹಿತರಿಲ್ಲದ ಕೇರಳ ಸರ್ಕಾರದ ಯೋಜನೆಯನ್ವಯ ಭೂಮಿ ಹಂಚಿಕೆಯಾಗುತ್ತಿರುವ ಸಂದರ್ಭ ಯೋಧರಿಗಾಗಿ ಮೀಸಲಿರಿಸಿದ ಜಾಗವನ್ನು ಕಬಳಿಸುವ ಯತ್ನವನ್ನು ವಿಫಲಗೊಳಿಸಿದ ಅಧಿಕಾರಿಯನ್ನು ಕೊಲೆಗೆ ಯತ್ನಿಸಿರುವ ಭೂಮಾಫಿಯಾದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.

ಮಂಜೇಶ್ವರ ತಾಲೂಕಿನ ಕುಡಾಲ್‍ಮೇರ್ಕಳ ಗ್ರಾಮದ ರೀಸರ್ವೇ ನಂಬರ್25/1ಎ2ಬಿಯಲ್ಲಿಒಳಗೊಂಡ 2.2ಎಕರೆ ಜಾಗವನ್ನು ಕುಡಾಲುಮೇರ್ಕಳ ಚೇವಾರು ನಿವಾಸಿ ಮಹಮ್ಮದ್‍ಕುಞÂ ಎಂಬವರಿಗೆ 1982ರಲ್ಲಿ ವಿಂಗಡಿಸಿ ನೀಡಿರುವ ಬಗ್ಗೆ ನಕಲಿ ದಾಖಲೆ ತಯಾರಿಸಿರುವುದಾಗಿ ತಿಳಿಸಿ ವಿಜಿಲೆನ್ಸ್ ನಿರ್ದೇಶಕರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು. ನಿವೃತ್ತ ಯೋಧರಿಗೆ ಮೀಸಲಿರಿಸಿದ ಜಾಗ ಇದಾಗಿದ್ದು, ಇಲ್ಲಿ ನಿವೃತ್ತ ಯೋಧರಿಗೆ ಜಾಗ ಮಂಜೂರಾಗಿಲ್ಲ ಎಂಬುದು ಖಚಿತವಾಗಿತ್ತು. ಆದರೆ ಈ ಜಾಗವನ್ನು ನಕಲಿ ದಾಖಲೆ ನಿರ್ಮಿಸಿ ತಮ್ಮದಗಿಸಿಕೊಮಡು, ಈ ಜಾಗವನ್ನು ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡುವುದನ್ನು ಪತ್ತೆಹಚ್ಚಲಾಗಿದ್ದು, ಈ ಬಗ್ಗೆ ನೀಡಿದ ದೂರನ್ನು ಅಧಿಕಾರಿ ವಲಯ ಅವಗಣಿಸಿರುವುದಾಗಿಯೂ ದೂರಲಾಗುತ್ತಿದೆ. ಮಹಮ್ಮದ್‍ಕುಞÂ ಅವರನ್ನು ಕೊಲೆಗೆ ಯತ್ನಿಸಿದ ತಮಡದಲ್ಲಿ ಮರಳುಮಾಫಿಯಾಗೆ ಸೇರಿದ ವ್ಯಕ್ತಿಯೂ ಒಳಗೊಂಡಿದ್ದಾನೆನ್ನಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries