ಬೆಂಗಳೂರು: ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯವು ಚಿನ್ನದ ಗಟ್ಟಿಗಳೊಂದಿಗೆ ಬಂಧಿಸಿದ್ದು, ಅವರ ಮಲತಂದೆ ಮತ್ತು ಕರ್ನಾಟಕದ ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ಪಾತ್ರದ ಬಗ್ಗೆ ತನಿಖೆಗೆ ಆದೇಶಿಸಿದೆ. ಅಂತಾರಾಷ್ಟ್ರೀಯ ಸಂಪರ್ಕ ಹೊಂದಿರುವ ಚಿನ್ನದ ಕಳ್ಳಸಾಗಣೆ ದಂಧೆಯ ತನಿಖೆಗೆ ಸಿಬಿಐ ಮುಂದಾಗುತ್ತಿದ್ದಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ರಕ್ಷಣಾತ್ಮಕವಾಗಿ ನಿಂತಿತು.
ಕರ್ನಾಟಕ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರನ್ನು ತನಿಖೆಗೆ ನಿಯೋಜಿಸಿದೆ. ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಪೋಲೀಸ್ ಅಧಿಕಾರಿಗಳ ಕಡೆಯಿಂದ ಆಗಿರುವ ಲೋಪದೋಷಗಳ ಬಗ್ಗೆ ವರದಿ ಸಲ್ಲಿಸುವಂತೆ ಸಿಐಡಿ ಇಲಾಖೆಗೆ ಆದೇಶಿಸಲಾಯಿತು.
ಮಾರ್ಚ್ 3 ರಂದು ದುಬೈನಿಂದ ಆಗಮಿಸಿದ ನಟಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯವು 12.5 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನದ ಗಟ್ಟಿಗಳೊಂದಿಗೆ ಬಂಧಿಸಿತ್ತು.
ಡಿಜಿಪಿ ಮಗಳಾಗಿ ರನ್ಯಾ ರಾವ್ ಶಿಷ್ಟಾಚಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ವರದಿಗಳು ಬಂದಿವೆ.





