ಅಲಪ್ಪುಳ: ನರ್ಸಿಂಗ್ ಪ್ರವೇಶದ ಭರವಸೆ ನೀಡಿ ಹಣ ಸುಲಿಗೆ ಮಾಡಿದ್ದಕ್ಕಾಗಿ ಕಾಯಂಕುಳಂನಲ್ಲಿ ಸಿಪಿಎಂನ ನಾಯಕನನ್ನು ಪಕ್ಷದಿಂದ ಅಮಾನತುಗೊಳಿಸಲಾಯಿತು. ಕಾಯಂಕುಳಂ ಪುತುಪ್ಪಳ್ಳಿ ಸ್ಥಳೀಯ ಸಮಿತಿ ಸದಸ್ಯ ಎಸ್. ಸುಭಾಷ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಅವರ ವಿರುದ್ಧ ಆರು ದೂರುಗಳು ಬಂದಿದ್ದವು. ಸಿಪಿಎಂ ವಿಶ್ವಾಸಾರ್ಹತೆ ಪಡೆಯಲು ರಾಜ್ಯ ಕಾರ್ಯದರ್ಶಿ ಸೇರಿದಂತೆ ನಾಯಕರೊಂದಿಗೆ ತಾನಿರುವ ಪೋಟೋಗಳನ್ನು ತೋರಿಸಿ ವಂಚನೆ ಮಾಡಲಾಗಿತ್ತು.
ಕಟ್ಟಣಂ ಮತ್ತು ಕೊಟ್ಟಾಯಂನಲ್ಲಿರುವ ನರ್ಸಿಂಗ್ ಕಾಲೇಜುಗಳಲ್ಲಿ ಪ್ರವೇಶ ನೀಡುವುದಾಗಿ ಭರವಸೆ ನೀಡಿದ್ದ. ದೂರಿನ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ನಂತರ, ಸ್ಥಳೀಯ ಸಮಿತಿಯು ಮನ್ನೆ ರಾತ್ರಿ ಪ್ರದೇಶ ಕಾರ್ಯದರ್ಶಿಯ ಸಮ್ಮುಖದಲ್ಲಿ ಸಭೆ ಸೇರಿ ಕ್ರಮ ಕೈಗೊಳ್ಳಲು ನಿರ್ಧರಿಸಿತು.
ದೂರುಗಳ ತನಿಖೆಗಾಗಿ ಮೂವರು ಸದಸ್ಯರ ಆಯೋಗವನ್ನೂ ನೇಮಿಸಲಾಗಿದೆ. ಆಯೋಗದ ಸದಸ್ಯರಾಗಿ ಏರಿಯಾ ಸಮಿತಿ ಸದಸ್ಯ ಯೇಸುದಾಸ್, ಎಲ್‍ಸಿ ಕಾರ್ಯದರ್ಶಿ ಮೋಹನ್ ದಾಸ್ ಮತ್ತು ಎಲ್‍ಸಿ ಸದಸ್ಯ ಜಯಕುಮಾರ್ ಇದ್ದಾರೆ.
ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದ ಆರೋಪದ ಮೇಲೆ ಸುಭಾಷ್ ವಿರುದ್ಧ ದೂರು ದಾಖಲಾಗಿತ್ತು.





