ತಿರುವನಂತಪುರಂ: ಕೇರಳಕ್ಕೆ ಭವಿಷ್ಯದಲ್ಲಿ ಮಹಿಳಾ ಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂದು ಸಿಪಿಎಂ ಕೇಂದ್ರ ಸಮಿತಿ ಸದಸ್ಯೆ ಕೆ.ಕೆ. ಶೈಲಜಾ ಹೇಳಿದ್ದಾರೆ. ಮಹಿಳೆಯರು ಮುಖ್ಯಮಂತ್ರಿಯಾಗುವುದನ್ನು ಸಿಪಿಎಂ ವಿರೋಧಿಸುವುದಿಲ್ಲ ಎಂದವರು ತಿಳಿಸಿರುವರು. ಸಿಪಿಎಂ ಮಹಿಳೆಯರಿಗೆ ಯಾವಾಗಲೂ ಪರಿಗಣನೆ ನೀಡುವ ಪಕ್ಷ ಎಂದು ಕೆ.ಕೆ.ಶೈಲಜಾ ಹೇಳಿದರು.
ಎಲ್ಲಾ ಕ್ಷೇತ್ರಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗಬೇಕು. ಜಗತ್ತಿನ ಶೇ. 50 ರಷ್ಟು ಮಹಿಳೆಯರು ಇದ್ದಾರೆ. ಮಹಿಳೆಯರು ಬೆಳೆಯುತ್ತಿದ್ದಾರೆ. ಪಕ್ಷದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚುತ್ತಿದೆ. ಇದು ಮತ್ತಷ್ಟು ಹೆಚ್ಚಾಗಬೇಕು. ಶಾಖಾ ಕಾರ್ಯದರ್ಶಿಯಿಂದ ಪ್ರದೇಶ ಕಾರ್ಯದರ್ಶಿಯವರೆಗೆ, ಮಹಿಳೆಯರು ಹೊಸ ನಾಯಕಿಯರಾಗಿದ್ದಾರೆ. ತಾನು ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಸಚಿವೆಯಾದವಳು ಎಂದು ಮಹಿಳಾ ದಿನಾಚರಣೆ ಸಮಾರಂಭವೊಂದರಲ್ಲಿ ತಿಳಿಸಿದ್ದಾರೆ.





