ಕಾಸರಗೋಡು: ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‍ಐ-ಐಸಿಎಆರ್)ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಕಾಸರಗೋಡು ಜಿಲ್ಲಾ ಪೆÇಲೀಸ್ ಮುಖ್ಯಸ್ಥೆ ಶಿಲ್ಪಾ ಡಿ., ಐಪಿಎಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಹಿಳೆಯರು ತಮ್ಮ ಸಾಮಥ್ರ್ಯವನ್ನು ಗುರುತಿಸಿ, ಅವರು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಸಾಧನೆಯ ಮೂಲಕ ಗುರಿತಲುಪಲು ಶ್ರಮಿಸಬೇಕು ಎಂದು ತಿಳಿಸಿದರು.
ಐಸಿಎಆರ್-ಸಿಪಿಸಿಆರ್‍ಐ ನಿರ್ದೇಶಕ ಡಾ. ಕೆ.ಬಿ. ಹೆಬ್ಬಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಪಿಸಿಆರ್‍ಐ ಒಂದು ಸಂಸ್ಥೆಯಾಗಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸಂಸ್ಥೆ ಉತ್ತಮ ಶೇಕಡಾವಾರಿನೊಂದಿಗೆ ಮಹಿಳಾ ಸಿಬ್ಬಂದಿಯನ್ನು ಒಳಗೊಂಡಿದೆ. ವ್ಯಕ್ತಿತ್ವಕ್ಕಿಂತ ಎಂದಿಗೂ ಕಾರ್ಯಕ್ಷಮತೆ ಮುಖ್ಯವಾಗುವುದಾಗಿ ತಿಳಿಸಿದರು.
ಮುಖ್ಯ ಹಣಕಾಸು ಮತ್ತು ಲೆಕ್ಕಪತ್ರ ಅಧಿಕಾರಿ (ಸಿಎಫ್‍ಎಓ) ಶ್ರೀ ರಾಮ್ ಅವತಾರ್ ಪರಾಶರ್ ಅವರು ಮಹಿಳಾ ಶಕತಿಯ ಕುರಿತು ವಿಚಾರ ಮಂಡಿಸಿ, ಮಹಿಳೆಯರ ಆರ್ಥಿಕ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಚರ್ಚಿಸಿದರು. ತೆಂಗು ಆಧಾರಿತ ಉದ್ದಿಮೆಯಲ್ಲಿ ಯಶಸ್ಸು ಸಾಧಿಸಿದ ಮಹಿಳಾ ಉದ್ಯಮಿ, ಕಾಸರಗೋಡಿನ ಪರಕ್ಕಟ್ಟಾದ ಮೆಸ್ಸರ್ಸ್ ಬ್ಲೆಸ್ ಫಾರ್ಮ್ ಫ್ಲೇವ್‍ನ ಮಾಲಕಿ ಅನ್ನಮ್ಮ ಟಿ.ಎಂ ಅವರನ್ನು ಈ ವಲಯಕ್ಕೆ ನೀಡಿದ ಗಮನಾರ್ಹ ಕೊಡುಗೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಸಿಪಿಸಿಆರ್‍ಐ ಕಾಸರಗೋಡಿನ ಇಬ್ಬರು ಅತ್ಯುತ್ತಮ ಮಹಿಳಾ ಉದ್ಯೋಗಿಗಳನ್ನು ಗೌರವಿಸಲಾಯಿತು. ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ತರಬೇತಿದಾರರಿಗೆ ಪ್ರಮಾಣಪತ್ರ ವಿತರಣೆ, ಬಹುಮಾನ ವಿತರಣಾ ಸಮಾರಂಭ ನಡೆಯಿತು. ಕಾರ್ಯಕ್ರಮಕ್ಕೆ ಸಾಂಸ್ಕøತಿಕ ಸ್ಪರ್ಶವನ್ನು ನೀಡಿದ, ತಾಂತ್ರಿಕ ಸಹಾಯಕ ದಿನೇಶ್ ಕುಮಾರ್ ಎನ್. ಅವರು ತಮ್ಮ ಕವನ ಸಂಕಲನವನ್ನು ವಾಚಿಸಿದರು.
ಬೆಳೆ ಸುಧಾರಣಾ ವಿಭಾಗದ ಮುಖ್ಯಸ್ಥರು ಮತ್ತು ಮಹಿಳಾ ಕಲ್ಯಾಣ ಸಮಿತಿಯ (ಡಬ್ಲ್ಯೂಡಬ್ಲ್ಯೂಸಿ) ಅಧ್ಯಕ್ಷೆ ಡಾ. ವಿ. ನಿರಾಲ್ ಸ್ವಾಗತಿಸಿದರು. ಮಹಿಳಾ ಕಲ್ಯಾಣ ಸಮಿತಿಯ ಕಾರ್ಯದರ್ಶಿ ಅಶಾಮೋಲ್ ಇ.ಪಿ. ವಂದಿಸಿದರು.




