ಆನ್‌ಲೈನ್‌ನಲ್ಲಿ ಕೆಲವೊಮ್ಮೆ ಯಾವೆಲ್ಲಾ ವಿಚಾರಗಳಿಗೆ ಚರ್ಚೆ ಹುಟ್ಟಿಕೊಳ್ಳುತ್ತವೆ ಅಂದ್ರೆ ಅದೆಷ್ಟು ಅನವಶ್ಯಕವಾಗಿ ಕಾಣಿಸಲಿದೆ ಎಂಬುದನ್ನು ನೀವು ಊಹಿಸಲು ಕೂಡ ಆಗೋದಿಲ್ಲ. ಈ ಚರ್ಚೆಗಳು ಅನಾವಶ್ಯಕ ಎನಿಸಿದರೂ ಕೂಡ ನಿಮ್ಮ ಗಮನ ಸೆಳೆಯುವುದು ಕೂಡಬಹುದು. ಅದರಲ್ಲೂ ವಿಶೇಷವಾಗಿ ಎಕ್ಸ್, ಫೇಸ್‌ಬುಕ್‌ನಂತಹ ಮಾಧ್ಯಮದಲ್ಲಿ ಇತ್ತಿಚಿಗೆ ಹಲವು ವಿಚಾರಗಳ ಕುರಿತಾಗಿ ಚರ್ಚೆಗಳು ದೊಡ್ಡದಾಗುವುದು ನೋಡಬಹುದು.
ಅಷ್ಟಕ್ಕೂ ಎಲ್ಲರ ಮನೆಯಲ್ಲೂ ಈ ಟವಲ್ ಬಳಸುವುದು ಕಾಮನ್, ಹಾಗಾದ್ರೆ ಈ ಟವೆಲ್ ಚರ್ಚೆ ಆಗುತ್ತಿರುವುದು ಏಕೆ?, ಟವೆಲ್ ಕುರಿತಂತೆ ನೆಟ್ಟಿಗರು ಚರ್ಚೆ ನಡೆಸುತ್ತಿರುವುದೇಕೆ? ಎಂಬುದನ್ನು ನಾವಿಲ್ಲಿ ತಿಳಿಯೋಣ.
ಟವೆಲ್‌ಗಳು ಎಲ್ಲವೂ ಒಂದೇ ರೀತಿ ಡಿಸೈನ್‌ನಲ್ಲಿ ಇರುವುದಿಲ್ಲ ಎಂಬುದು ನಮಗೆಲ್ಲಾ ತಿಳಿದಿದೆ. ಈ ಟವೆಲ್‌ಗಳು ಒಂದೊಂದು ರೀತಿಯ ಬಟ್ಟೆಯಿಂದ ಮಾಡಲಾಗಿರುತ್ತದೆ. ನೀರು ಚೆನ್ನಾಗಿ ಹೀರಿಕೊಳ್ಳುವಂತಹ ಬಟ್ಟೆಯಿಂದ ಹೆಚ್ಚಾಗಿ ಟವೆಲ್‌ಗಳ ಮಾಡಲಾಗುತ್ತದೆ. ಆದ್ರೆ ನೀವು ಟವೆಲ್‌ಗಳ ಹಿಂದಿರುವ ಡಿಸೈನ್ ಕುರಿತು ಆಲೋಚಿಸಿದ್ದೀರಾ?
ಹೌದು ಹತ್ತಿಯ ಮೃದುವಾದ ಟವೆಲ್‌ನ ಬುಡದಲ್ಲಿ ಕಾಣಿಸುವಂತಹ ದಪ್ಪ ಗೆರೆಯ ಡಿಸೈನ್ ಇರುತ್ತದೆ. ಈ ರೀತಿ ಡಿಸೈನ್ ಏಕೆ ಮಾಡುತ್ತಾರೆ? ಟವೆಲ್‌ನ ಕೆಳಭಾಗದಲ್ಲಿರುವ ವಿಚಿತ್ರ ಗೆರೆಗಳಿರುವ ಡಿಸೈನ್ ಏಕೆ ಮಾಡುತ್ತಾರೆ ಎಂಬುದು ನಿಮಗೆ ಗೊತ್ತಾ? ಹೌದು ಈ ರೀತಿಯ ಪ್ರಶ್ನೆಗಳು, ಈ ರೀತಿಯ ಚರ್ಚೆಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಎಕ್ಸ್ ಖಾತೆಯೊಂದರಲ್ಲಿ ಈ ಕುರಿತು ಫೋಟೋ ಹಂಚಿಕೊಳ್ಳಲಾಗಿದ್ದು, ಈ ಟವೆಲ್ ಕೆಳಭಾಗದಲ್ಲಿ ಈ ರೀತಿ ಡಿಸೈನ್‌ಗಳು ಏಕೆ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅಚ್ಚರಿ ಏನೆಂದರೆ ಟವೆಲ್‌ಗಳು ಡಿಸೈನ್ ಆಗಿರುವುದರ ಹಿಂದೆ ಯಾವುದೇ ವಿಶೇಷ ಲಾಭವಿಲ್ಲ. ಏಕೆಂದರೆ ಟವೆಲ್‌ಗಳು ಎಷ್ಟು ಡಿಸೈನ್ ಆಗಿದ್ದರೂ ಅದರನ್ನು ಮನೆಯೊಳಗೆ ಬಳಸುತ್ತಾರೆಯೇ ಹೊರತು ಯಾರಾದರು ಈ ಡಿಸೈನ್ ನೋಡಿ ಮೆಚ್ಚಿಕೊಳ್ಳಲಿ ಎಂದು ಬಳಸುವವರಿಲ್ಲ. ಆದರೂ ಟವೆಲ್ ಅನ್ನು ತೊಳೆದು ಹೊರಗೆಎ ಒಣಗಲು ಹಾಕಿದರೆ ಮಾತ್ರ ಅದನ್ನು ಯಾರಾದರು ನೋಡಬಹುದಷ್ಟೇ.
ಆದ್ರೆ ಈ ಫೋಟೊ ಜಾಲತಾಣದಲ್ಲಿ ವೈರಲ್ ಆಗಿದ್ದು ಹಲವರು ಈ ಪ್ರಶ್ನೆ ನೋಡಿ ತಲೆ ಕೆಡಿಸಿಕೊಂಡಿದ್ದಾರೆ. ಬಿಸಿ ಬಿಸಿ ಚರ್ಚೆ ಶುರುವಾಗಲು ಕಾರಣವಾಗಿರುವ ಈ ಟವೆಲ್‌ನ ಕೆಳಗೆ ಡಿಸೈನ್ ಏಕಿದೆ ಎಂಬುದನ್ನು ತಿಳಿಯದೆ ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ.
ಅಚ್ಚರಿ ಎಂದರೆ ಟವೆಲ್ ಖರೀದಿ ಮಾಡುವಾಗ ಗ್ರಾಹಕರ ಸೆಳೆಯುವ ಉದ್ದೇಶದಿಂದ ಈ ರೀತಿ ಡಿಸೈನ್ ಮಾಡಲಾಗಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದು ಈ ಮಾತಿಗೆ ಹಲವರು ಸಮ್ಮಿತಿ ಸೂಚಿಸಿದ್ದಾರೆ. ಏಕೆಂದರೆ ಇದನ್ನು ಹೊರತು ಪಡಿಸಿ ಟವೆಲ್‌ನ ಈ ಡಿಸೈನ್ ಎಲ್ಲಿಯೂ ತನ್ನ ಪ್ರಭಾವ ಉಂಟು ಮಾಡಿದಂತೆ ಕಾಣಿಸುವುದಿಲ್ಲ.
ಕೆಲವರು ಪ್ರಕಾರ ಟವೆಲ್ ಅನ್ನು ಒಂದೆ ರೀತಿ ಬಳಸುವ ಉದ್ದೇಶದಿಂದ ಹೀಗೆ ಕೆಳಭಾಗದಲ್ಲಿ ಡಿಸೈನ್ ಮಾಡಲಾಗಿರುತ್ತದೆ ಅಂತೆ. ಏಕೆಂದರೆ ನಿಮ್ಮ ಮುಖದ ಭಾಗವನ್ನು ಯಾವಾಗಲು ಟವೆಲ್‌ನ ಒಂದೇ ಕಡೆ ಒರಿಸಲು ಬಳಸುವಂತೆ ಇದು ನೆರವಾಗಲಿದೆ ಅಂತೆ, ಇದರಿಂದ ಟವೆಲ್‌ನ ಕೆಳಭಾಗದಲ್ಲಿ ಡಿಸೈನ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದ್ರೆ ಯಾಕೆ ಡಿಸೈನ್ ಇರಲಿದೆ ಎಂಬುದನ್ನು ಯಾರು ಕೂಡ ಖಚಿತವಾಗಿ ಹೇಳಲಾಗಿಲ್ಲ.






