ನವದೆಹಲಿ: ತೇಜಸ್ ಯುದ್ಧ ವಿಮಾನದ ಪೈಲಟ್‌ಗಳಿಗಾಗಿ ಎತ್ತರದ ಪ್ರದೇಶಗಳಲ್ಲಿ ಸಮಗ್ರ ಜೀವರಕ್ಷಕ ವ್ಯವಸ್ಥೆಯನ್ನು ಡಿಆರ್‌ಡಿಒ ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ.
ಸಾಂಪ್ರದಾಯಿಕ ಸಿಲಿಂಡರ್ ಆಧಾರಿತ ಆಮ್ಲಜನಕ ವ್ಯವಸ್ಥೆಯನ್ನು ತೆಗೆದು ಹಾಕಿ ಪೈಲಟ್‌ಗಳಿಗೆ ವಿಮಾನ ಹಾರಾಟದ ವೇಳೆ ಆಮ್ಲಜನಕ ಉತ್ಪಾದಿಸುವ ಮತ್ತು ಉಸಿರಾಟ ನಿಯಂತ್ರಿಸುವ ಅತ್ಯಾಧುನಿಕ ಜೀವರಕ್ಷಕ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ರಕ್ಷಣ ಸಚಿವಾಲಯ ತಿಳಿಸಿದೆ.
ಮಂಗಳವಾರ ಇದರ ಪರೀಕ್ಷಾರ್ಥ ಪ್ರಯೋಗವನ್ನೂ ನಡೆಸಲಾಗಿತ್ತು.




